Video: ಸರ್ಕಸ್ನಲ್ಲಿ ಸೇಫ್ಟಿನೆಟ್ ದಾಟಿ ವೇದಿಕೆ ಎದುರಿದ್ದ ಪ್ರೇಕ್ಷಕರೆಡೆಗೆ ಹಾರಿದ ಹುಲಿ
ಸರ್ಕಸ್ನಲ್ಲಿ ಸೇಫ್ಟಿನೆಟ್ ದಾಟಿ ಹುಲಿಯೊಂದು ಪ್ರೇಕ್ಷಕರಿದ್ದಲ್ಲಿಗೆ ಹಾರಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಹುಲಿಯೊಂದು ಇದ್ದಕ್ಕಿದ್ದಂತೆ ಪ್ರೇಕ್ಷಕರತ್ತ ಹಾರಿತು. ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ಕ್ಷಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಸ್ ಕುರಿತು ಕಳವಳ ಹುಟ್ಟುಹಾಕಿದೆ. ಆ ಸರ್ಕಸ್ನಲ್ಲಿ ಮೂರು ಹುಲಿಗಳು ಹಾಗೂ ಒಬ್ಬ ತರಬೇತುದಾರನಿದ್ದ. ಆ ಸುರಕ್ಷತಾ ನೆಟ್ ಹರಿದುಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಗ ಹುಲಿಯು ವೇದಿಕೆ ಎದುರಿದ್ದ ಪ್ರೇಕ್ಷಕರಿದ್ದಲ್ಲಿಗೆ ಹಾರಿದೆ. ಯಾರೂ ಕೂಗಾಡದಂತೆ ಓಡದಂತೆ ಪ್ರೇಕ್ಷಕರಿಗೆ ಸಲಹೆ ನೀಡಲಾಯಿತು. ಕೂಡಲೇ ತರಬೇತುದಾರ ಆ ಹುಲಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರಷ್ಯಾ, ಏಪ್ರಿಲ್ 22: ಸರ್ಕಸ್ನಲ್ಲಿ ಸೇಫ್ಟಿನೆಟ್ ದಾಟಿ ಹುಲಿಯೊಂದು ಪ್ರೇಕ್ಷಕರಿದ್ದಲ್ಲಿಗೆ ಹಾರಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಹುಲಿಯೊಂದು ಇದ್ದಕ್ಕಿದ್ದಂತೆ ಪ್ರೇಕ್ಷಕರತ್ತ ಹಾರಿತು. ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ಕ್ಷಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಸ್ ಕುರಿತು ಕಳವಳ ಹುಟ್ಟುಹಾಕಿದೆ. ಆ ಸರ್ಕಸ್ನಲ್ಲಿ ಮೂರು ಹುಲಿಗಳು ಹಾಗೂ ಒಬ್ಬ ತರಬೇತುದಾರನಿದ್ದ. ಆ ಸುರಕ್ಷತಾ ನೆಟ್ ಹರಿದುಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಗ ಹುಲಿಯು ವೇದಿಕೆ ಎದುರಿದ್ದ ಪ್ರೇಕ್ಷಕರಿದ್ದಲ್ಲಿಗೆ ಹಾರಿದೆ. ಯಾರೂ ಕೂಗಾಡದಂತೆ ಓಡದಂತೆ ಪ್ರೇಕ್ಷಕರಿಗೆ ಸಲಹೆ ನೀಡಲಾಯಿತು. ಕೂಡಲೇ ತರಬೇತುದಾರ ಆ ಹುಲಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 22, 2026 09:28 AM
Follow Us

