Viral Video: ಲಿಫ್ಟ್​ನೊಳಗೆ ಮೂತ್ರ ಮಾಡಿದ ಬಾಲಕ ಶಾಕ್; ಮಾಡಿದ್ದುಣ್ಣೋ ಮಾರಾಯ ಎಂದ ನೆಟ್ಟಿಗರು

Updated on: Jul 10, 2024 | 8:49 PM

ಮಕ್ಕಳು ಹೋದಲ್ಲೆಲ್ಲ ಕಿತಾಪತಿ ಮಾಡುವುದು, ತರಲೆ ಮಾಡುವುದು ಸಾಮಾನ್ಯ. ಅದೇ ರೀತಿ ಬಾಲಕನೊಬ್ಬನಿಗೆ ಲಿಫ್ಟ್​ ಹತ್ತುತ್ತಿದ್ದಂತೆ ತರಲೆ ಐಡಿಯಾವೊಂದು ಬಂದಿದೆ. ಚಡ್ಡಿ ಬಿಚ್ಚಿದ ಆತ ಕ್ಲೀನಾಗಿದ್ದ ಲಿಫ್ಟ್​ನೊಳಗೆ ಹಾಗೂ ಲಿಫ್ಟ್​ ಬಟನ್​ಗಳ ಮೇಲೆ ಮೂತ್ರ ಮಾಡಿದ್ದಾನೆ. ಆಮೇಲೆ ಏನಾಯ್ತು ಎಂದು ನೀವೇ ನೋಡಿ.

ಲಿಫ್ಟ್​ನಲ್ಲಿ ತನ್ನ ಮನೆಗೆ ಹೋಗಲು ಲಿಫ್ಟ್ ಹತ್ತಿದ ಬಾಲಕನೊಬ್ಬನಿಗೆ ಸ್ವಲ್ಪ ತರಲೆ ಮಾಡುವ ಮನಸಾಯಿತು. ಹೀಗಾಗಿ, ಲಿಫ್ಟ್​ ಬಟನ್​ಗಳ ಮೇಲೆ ಮೂತ್ರ ಮಾಡಿದ್ದಾನೆ. ಆದರೆ, ಮೂತ್ರ ತಾಗುತ್ತಿದ್ದಂತೆ ಆ ಲಿಫ್ಟ್ ಜಾಮ್ ಆಗಿ ಮಧ್ಯದಲ್ಲೇ ನಿಂತುಬಿಟ್ಟಿತು. ಇದರಿಂದ ಶಾಕ್ ಆದ ಆ ಬಾಲಕ ತನ್ನ ಚಡ್ಡಿಯನ್ನು ಮೇಲೆತ್ತಿಕೊಂಡು ಕಿರುಚಾಡಿದ್ದಾನೆ, ತಲೆಕೂದಲು ಜಗ್ಗಿಕೊಂಡು ಗೋಳಾಡಿದ್ದಾನೆ. ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನ ಮಾಡಿ ಒದ್ದಾಡಿದ್ದಾನೆ. ಈ ದೃಶ್ಯ ಲಿಫ್ಟ್​ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಷ್ಯಾದ ಅಪಾರ್ಟ್​ಮೆಂಟ್​ವೊಂದರಲ್ಲಿ ಈ ಘಟನೆ ನಡೆದಿದೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಬಾಲಕನನ್ನು ಲಿಫ್ಟ್​ನಿಂದ ಹೊರಗೆ ತಂದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇನ್​ಸ್ಟಂಟ್ ಕರ್ಮ ಎಂದರೆ ಇದೇ ನೋಡಿ ಎಂದು ಲೇವಡಿ ಮಾಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More