ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್​​ನಲ್ಲಿ ಪತನ, 74 ಸಾವು

|

Updated on: Jan 24, 2024 | 7:06 PM

ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್​​ನಲ್ಲಿ ಪತನಗೊಂಡಿದೆ. ರಷ್ಯಾದ ಇಲ್ಯುಶಿನ್ -76 ಮಿಲಿಟರಿ ವಿಮಾನವು ಉಕ್ರೇನ್​​ನ ಗಡಿಯ ದಕ್ಷಿಣ ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಹೇಳಲಾಗಿದೆ.

ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್​​ನಲ್ಲಿ ಪತನಗೊಂಡಿದೆ. ರಷ್ಯಾದ ಇಲ್ಯುಶಿನ್ -76 ಮಿಲಿಟರಿ ವಿಮಾನವು ಉಕ್ರೇನ್​​ನ ಗಡಿಯ ದಕ್ಷಿಣ ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಯಲ್ಲಿ 74 ಜನ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ರಿಯಾ ನೊವೊಸ್ಟಿ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ ವಿಮಾನದೊಳಗಿದ್ದ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಉಕ್ರೇನ್ ವಶಪಡಿಸಿಕೊಂಡಿದೆ ಎಂದು ಹೇಳಲಾಗಿದೆ.  ಇನ್ನು ಈ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ. ಇದನ್ನು ತನಿಖೆ ಮಾಡಲಾಗುವುದು ವಿಶೇಷ ಮಿಲಿಟರಿ ಆಯೋಗವನ್ನು ರಚನೆ ಮಾಡಲಾಗಿದೆ. ಬೆಲ್ಗೊರೊಡ್ ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಅವರು ಈ ಬಗ್ಗೆ ವರದಿಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ವಿಮಾನ ಪತನಗೊಂಡಿರುವ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:46 pm, Wed, 24 January 24