‘ಮತ್ತೆ ಗುರುವಾರ ಬರ್ತೀನಿ’; ದರ್ಶನ್ ಭೇಟಿ ಬಗ್ಗೆ ಸಾಧು ಕೋಕಿಲ ಮಾತು

Updated on: Jul 24, 2024 | 8:07 AM

ನಟ ದರ್ಶನ್​ ಅವರು ಚಿತ್ರರಂಗದ ಅನೇಕರ ಜೊತೆ ಒಡನಾಟ ಹೊಂದಿದ್ದಾರೆ. ಆದರೆ ಈಗ ಅವರು ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ಜೈಲಿನಲ್ಲಿ ಇದ್ದಾರೆ. ಅವರನ್ನು ನೋಡಲು ಸಾಧು ಕೋಕಿಲ ತೆರಳಿದ್ದರು. ಆದರೆ, ಅವರಿಗೆ ಸಿನಿಮಾಗೆ ಅವಕಾಶ ಸಿಕ್ಕಿಲ್ಲ.

ಸಾಧು ಕೋಕಿಲ ಅವರು ಮಂಗಳವಾರ (ಜುಲೈ 23) ದರ್ಶನ್ ಅವರನ್ನು ಭೇಟಿ ಮಾಡಲು ತೆರಳಿದ್ದರು. ಆದರೆ, ಭೇಟಿ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಸಾಧು ಕೋಕಿಲ ವಿವರಿಸಿದ್ದಾರೆ. ‘ನಾನು ದರ್ಶನ್​ನ ಭೇಟಿ ಮಾಡಿಲ್ಲ. ಒಬ್ಬೊಬ್ಬರಿಗೆ ಎಂಟ್ರಿ ಕೊಡೋಕೆ ಆಗಲ್ಲ. ವಾರಕ್ಕೆ ಎರಡು ಬಾರಿ ಮಾತ್ರ ದರ್ಶನ್​ ಭೇಟಿಗೆ ಅವಕಾಶ ಇದೆ. ಏನೂ ಮಾಡೊಕ್ಕೆ ಆಗಲ್ಲ. ನಾನು ಈಗ ಭೇಟಿ ಮಾಡಿದರೆ ಉಳಿದವರಿಗೆ ಅವಕಾಶ ಸಿಗುವುದಿಲ್ಲ. ಗುರುವಾರ ಮತ್ತೆ ಬರ್ತೀನಿ. ಯಾರೆಲ್ಲ ಭೇಟಿ ಮಾಡ್ತಾರೆ ಎಂದು ನೋಡಿಕೊಂಡು ನಿರ್ಧಾರ ಮಾಡ್ತೀವಿ’ ಎಂದು ಸಾಧು ಕೋಕಿಲ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More