‘ಇನ್ನು 6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ

|

Updated on: Jun 30, 2024 | 4:37 PM

ಈಗಾಗಲೇ ಇರುವ ಒಟಿಟಿ ಸಂಸ್ಥೆಗಳು ಕನ್ನಡದ ಸಿನಿಮಾಗಳಿಗೆ ಸೂಕ್ತ ಮನ್ನಣೆ ನೀಡುತ್ತಿಲ್ಲ ಎಂಬ ಮಾತಿದೆ. ಹಾಗಾಗಿ ಸರ್ಕಾರದ ಕಡೆಯಿಂದಲೇ ಕನ್ನಡಕ್ಕಾಗಿ ಒಂದು ಒಟಿಟಿ ಆರಂಭ ಆಗಬೇಕು ಎಂಬುದು ಎಲ್ಲರ ಬಯಕೆ. ಈ ಹಿನ್ನೆಲೆಯಲ್ಲಿ ಸಾಧು ಕೋಕಿಲ ಅವರು ಹೊಸ ಘೋಷಣೆ ಮಾಡಿದ್ದಾರೆ. ಮುಂಬರುವ 6 ತಿಂಗಳ ಒಳಗೆ ‘ನಮ್ಮ ಚಲನಚಿತ್ರ’ ಒಟಿಟಿ ಶುರುವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಹೊಸ ಕಟ್ಟಡ ಇಂದು (ಜೂನ್​ 30) ನಿರ್ಮಾಣ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟಡದ ಉದ್ಘಾಟನೆ ಮಾಡಿದ್ದಾರೆ. ಈ ಸಂದರ್ಭಕ್ಕೆ ಕನ್ನಡ ಚಿತ್ರರಂಗದ ಅನೇಕರು ಸಾಕ್ಷಿಯಾದರು. ಈ ವೇಳೆ ವೇದಿಕೆಯಲ್ಲಿ ನಟ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ಹೊಸ ವಿಷಯ ತಿಳಿಸಿದರು. ಶೀಘ್ರದಲ್ಲೇ ಕನ್ನಡದ ಹೊಸ ಒಟಿಟಿ ಕಾರ್ಯಾರಂಭ ಆಗಲಿದೆ ಎಂದು ಅವರು ಹೇಳಿದ್ದಾರೆ. ‘ಇನ್ನು ಕೇವಲ 6 ತಿಂಗಳಲ್ಲಿ ಸರ್ಕಾರದ ವತಿಯಿಂದ, ಖಾಸಗಿಯವರ ಸಹಭಾಗಿತ್ವದಲ್ಲಿ ‘ನಮ್ಮ ಚಲನಚಿತ್ರ’ ಎಂಬ ಒಟಿಟಿ ಶುರುವಾಗುತ್ತದೆ. ಕೇವಲ 6 ತಿಂಗಳಲ್ಲಿ ನಾವು ಇದನ್ನು ಶುರು ಮಾಡುವುದು ಖಚಿತ. ಅದಕ್ಕೂ ಮುನ್ನ ‘ನಮ್ಮ ಚಲನಚಿತ್ರ’ ಎಂಬ ವೆಬ್​ಸೈಟ್​ ಕೂಡ ಪ್ರಾರಂಭಿಸುತ್ತೇವೆ. ಅದರಲ್ಲಿ ಸಿನಿಮಾಗಳ ಪೋಸ್ಟರ್​, ಟ್ರೇಲರ್​ ಎಲ್ಲವೂ ಇರುತ್ತದೆ’ ಎಂದು ಸಾಧು ಕೋಕಿಲ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.