AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ

‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ

ರಾಮು, ಆನೇಕಲ್​
| Edited By: |

Updated on: Jun 30, 2024 | 6:53 PM

Share

ನಟ ದರ್ಶನ್​ ಮೇಲೆ ಕೊಲೆ ಆರೋಪ ಇದೆ. ಹಾಗಿದ್ದರೂ ಕೂಡ ಅವರ ಮೇಲೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಕಡಿಮೆ ಆಗಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ ದಿನ ಕಳೆಯುತ್ತಿದ್ದಾರೆ. ಅವರನ್ನು ನೋಡಬೇಕು ಎಂದು ಪ್ರತಿ ದಿನ ಅನೇಕ ಅಭಿಮಾನಿಗಳು ಜೈಲಿನ ಬಳಿ ಬರುತ್ತಿದ್ದಾರೆ. ಅಂಥವರಲ್ಲಿ ಓರ್ವ ಅಭಿಮಾನಿ ಮಾತನಾಡಿದ ವಿಡಿಯೋ ಇಲ್ಲಿದೆ..

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್​ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಜೈಲಿನಲ್ಲಿ ಅವರನ್ನು ಭೇಟಿ ಆಗಬೇಕು ಎಂಬುದು ಅನೇಕರ ಬಯಕೆ. ಆ ಉದ್ದೇಶದಿಂದ ಹಲವರು ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ಕಾಯುತ್ತಿದ್ದಾರೆ. ಆದರೆ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ದರ್ಶನ್​ ಭೇಟಿ ಮಾಡಲು ಅವಕಾಶ ಸಿಗುತ್ತಿಲ್ಲ. ದರ್ಶನ್​ ಅಭಿಮಾನಿ ಆಗಿರುವ ಸುನಿಲ್​ ಎಂಬ ಆಟೋ ಚಾಲಕ ಇಂದು (ಜೂನ್​ 30) ಜೈಲಿನ ಎದುರು ನಿಂತು ಕಾದಿದ್ದಾರೆ. ‘ನಮಗೆ ಕಷ್ಟ ಇದ್ದಾಗ ನಾವು ಅವರ ಮನೆಗೆ ಹೋಗುತ್ತೇವೆ. ಅದೇ ರೀತಿ, ಅವರಿಗೆ ಕಷ್ಟ ಆದಾಗ ನಾವು ಅವರ ಜೊತೆಯಲ್ಲಿ ನಿಲ್ಲಬೇಕು. ದರ್ಶನ್ ಅವರನ್ನು ನೋಡಿದರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ. ನಮ್ಮ ಬಾಸ್​ನ ನೋಡಿದ್ವಿ ಎನ್ನುವ ಖುಷಿಯಲ್ಲಿ ಕೆಲಸ ಮಾಡುತ್ತೇವೆ. ನಾನು ಮಾರತ್ತಹಳ್ಳಿಯಿಂದ ಬಂದಿದ್ದೇನೆ. ತುಂಬ ಬೇಸರ ಆಗಿದೆ. ಇಲ್ಲಿಗೆ ಬರುವ ಅಭಿಮಾನಿಗಳು ಯಾರಿಗೂ ತೊಂದರೆ ಕೊಡಬಾರದು. ಅನೇಕರಿಗೆ ಬಾಸ್​ ಸಹಾಯ ಮಾಡಿದ್ದಾರೆ. ಯಾರದ್ದೇ ತಪ್ಪು ಇದ್ದರೂ ಶಿಕ್ಷೆ ಆಗಲಿ. ಬಾಸ್​ ಹೊರಗೆ ಬಂದಮೇಲೆ ಒಳ್ಳೆಯ ಕೆಲಸ ಮುಂದುವರಿಸಲಿ’ ಎಂದು ಸುನಿಲ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Ramu Ram
Ramu Ram

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More