ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ

Updated on: May 30, 2025 | 3:00 PM

Kamal Haasan: ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ. ಅವರ ಸಿನಿಮಾಗಳು ತಮಿಳುನಾಡಿನಲ್ಲಿ ಓಡಲಿಲ್ಲವೆಂದರೂ ಕರ್ನಾಟಕದಲ್ಲಿ ಹಿಟ್ ಆಗುತ್ತಿದ್ದವು. ಇಲ್ಲಿನ ಪ್ರೇಕ್ಷಕರು ಎಂದಿಗೂ ಅವರ ಕೈಬಿಟ್ಟಿಲ್ಲ. ಈಗ ಅವರ ಕಮಲ್ ಹೇಳಿಕೆಯಿಂದ ಕನ್ನಡಿಗರಿಗೆ ಬೇಸರ ಆಗಿದೆ. ಅವರು ಕ್ಷಮೆ ಕೇಳಲೇಬೇಕು ಎಂದಿದ್ದಾರೆ ಸಾಧುಕೋಕಿಲ.

ಕಮಲ್ ಹಾಸನ್ (Kamal Haasan) ಅವರು ಕನ್ನಡದ ಬಗ್ಗೆ ಆಡಿರುವ ಮಾತುಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಖಂಡಿಸಿದ್ದಾರೆ. ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ. ಅವರ ಸಿನಿಮಾಗಳು ತಮಿಳುನಾಡಿನಲ್ಲಿ ಓಡಲಿಲ್ಲವೆಂದರೂ ಕರ್ನಾಟಕದಲ್ಲಿ ಹಿಟ್ ಆಗುತ್ತಿದ್ದವು. ಇಲ್ಲಿನ ಪ್ರೇಕ್ಷಕರು ಎಂದಿಗೂ ಅವರ ಕೈಬಿಟ್ಟಿಲ್ಲ. ‘ಗುಣ’ ಇಲ್ಲಿ ಸೂಪರ್ ಹಿಟ್, ತಮಿಳುನಾಡಿನಲ್ಲಿ ಫ್ಲಾಪ್ ಆಗಿತ್ತು. ಕಮಲ್ ಅವರನ್ನು ಕನ್ನಡದ ಜನ ಪ್ರೀತಿಸುತ್ತಾರೆ. ಈಗ ಅವರ ಮಾತಿನಿಂದ ಕನ್ನಡಿಗರಿಗೆ ಬೇಸರ ಆಗಿದೆ. ಅವರು ಕ್ಷಮೆ ಕೇಳಲೇ ಬೇಕು, ಅವರಿಗೆ ಬೇರೆ ದಾರಿಯಿಲ್ಲ’ ಎಂದಿದ್ದಾರೆ ಸಾಧು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ