ಚಿತ್ರರಂಗ ಕೇಳಿದ್ದನ್ನೆಲ್ಲ ಬಜೆಟ್ನಲ್ಲಿ ಕೊಟ್ಟಿದ್ದಾರೆ: ಸಿದ್ದರಾಮಯ್ಯಗೆ ಸಾಧು ಕೋಕಿಲ ಧನ್ಯವಾದ
ಚಿತ್ರರಂಗವನ್ನು ಈಗ ಒಂದು ಉದ್ಯಮ ಎಂದು ಕರ್ನಾಟಕ ಸರ್ಕಾರ ಪರಿಗಣಿಸಿದೆ. ಹಾಗಾಗಿ ಅನೇಕ ಸವಲತ್ತುಗಳು ಚಿತ್ರರಂಗಕ್ಕೆ ಸಿಗಲಿವೆ. ಈ ಬಾರಿ ಕರ್ನಾಟಕ ಬಜೆಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಅನೇಕ ಕೊಡುಗೆಗಳನ್ನು ನೀಡಲಾಗಿದೆ. ಬಜೆಟ್ ಮಂಡನೆ ಬಳಿಕ ಸಾಧು ಕೋಕಿಲ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು 2025ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget 2025) ಮಂಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ಅವರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ಧನ್ಯವಾದ ತಿಳಿಸಿದ್ದಾರೆ. ‘ಚಿತ್ರೋತ್ಸವದ ಉದ್ಘಾಟನೆ ದಿನ ನಾನು ಅನೌನ್ಸ್ ಮಾಡಿದ್ದನ್ನು ಈ ಬಜೆಟ್ನಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕಾಗಿ ಸರ್ಕಾರದಿಂದ ಒಟಿಟಿ ಮಾಡಬೇಕು ಎಂದು ಕೇಳಿದ್ದೆ. ಅದನ್ನು ಕೂಡ ಓಕೆ ಮಾಡಿದ್ದಾರೆ’ ಎಂದು ಸಾಧು ಕೋಕಿಲ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.