ರಾಜ್ಯದ ಜನತೆಯ ರಕ್ಷಣೆ, ಭದ್ರತೆ ಸರ್ಕಾರದ ಹೊಣೆಗಾರಿಕೆ, ಹರಿಪ್ರಸಾದ್ ಹೇಳಿದ್ದು ಅರ್ಥವಾಗಿಲ್ಲ: ಮಾಳವಿಕಾ, ಬಿಜೆಪಿ ಕಾರ್ಯಕರ್ತೆ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಬಿಕೆ ಹರಿಪ್ರಸಾದ್ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು ಎಂದು ಮಾಳವಿಕಾ ಅವಿನಾಶ್ ಹೇಳಿದರು. ರಾಜ್ಯದ ಜನರ ರಕ್ಷಣೆ, ಸುರಕ್ಷತೆ ಸರ್ಕಾರದ ಜವಾಬ್ದಾರಿಯಾಗಿರುವುದರಿಂದ ಹರಿಪ್ರಸಾದ್ ಏನು ಹೇಳಲ ಬಯಸಿದ್ದಾರೆ ಅನ್ನೋದನ್ನು ಅವರನ್ನೇ ಕೇಳಬೇಕು ಎಂದು ಮಾಳವಿಕಾ ಹೇಳಿದರು.
ಬೆಂಗಳೂರು: ಇಂದು ಬೆಳಗ್ಗೆ ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡುವಾಗ ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ (BK Hariprasad), ರಾಮಮಂದಿರ ಪ್ರಾಣ ಪ್ರತಿಷ್ಠೆ (Ram Mandir Consecration ceremony) ಕಾರ್ಯಕ್ರಮದ ಸಂದರ್ಭದಲ್ಲಿ ಕರ್ನಾಟಕದಲ್ಲೂ ಗೋದ್ರಾದಂಥ ಘಟನೆ ಮರುಕಳಿಸಿದರೆ ಸೋಜಿಗ ಪಡಬೇಕಿಲ್ಲ ಅಂತ ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತೆ ಮಾಳವಿಕಾ ಅವಿನಾಶ್ (Malavika Avinash) ಅವರನ್ನು ಟಿವಿ9 ಬೆಂಗಳೂರು ವರದಿಗಾರ ಮಾತಾಡಿಸಿದಾಗ ಅನ್ಯಮನಸ್ಕತೆಯಿಂದ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಸರ್ಕಾರದ್ದು, ಹಾಗಾಗಿ ಹರಿಪ್ರಸಾದ್ ನೀಡಿರುವ ಹೇಳಿಕೆ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವ ವಿವರಣೆ ನೀಡಬೇಕು ಎಂದು ಮಾಳವಿಕಾ ಹೇಳಿದರು. ಒಂದು ಮಾತಂತೂ ಸತ್ಯ, ರಾಜ್ಯದ ಹಿಂದೂ ಕಾರ್ಯಕರ್ತರ ಮನಸ್ಸನಲ್ಲಿ ಭೀತಿ ಮೂಡಿಸುವ ಕೆಲಸ ಸರ್ಕಾರ ಮಾಡುತ್ತಿದೆ, ಇಲ್ಲದೆ ಹೋಗಿದ್ದರೆ 31 ವರ್ಷಗಳಷ್ಟು ಹಿಂದಿನ ಪ್ರಕರಣದಲ್ಲಿ ಕರಸೇವಕನನ್ನು ಬಂಧಿಸುವ ಕೆಲಸ ಅದು ಮಾಡುತ್ತಿರಲಿಲ್ಲ ಎಂದು ಮಾಳವಿಕಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ