Sai Dharam Tej: ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಸಾಯಿ ಧರಮ್​ ತೇಜ್​; ಆದರೆ ಆಪ್ತರು ಹೇಳೋದೇ ಬೇರೆ

| Updated By: ಮದನ್​ ಕುಮಾರ್​

Updated on: Sep 11, 2021 | 9:58 AM

Sai Dharam Tej Bike Accident: ಬೈಕ್​ ಅಪಘಾತದ ಬಳಿಕ ಸಾಯಿ ಧರಮ್​ ತೇಜ್​ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂದು ವರದಿ ಆಗಿದೆ. ಆದರೆ ಈ ನಡುವೆ ಕುಟುಂಬದವರು ಮತ್ತು ಆಪ್ತರು ಬೇರೆ ರೀತಿ ಹೇಳಿಕೆ ನೀಡುತ್ತಿದ್ದಾರೆ.

ಟಾಲಿವುಡ್​ ನಟ ಸಾಯಿ ಧರಮ್​ ತೇಜ್​ ಅವರು ಬೈಕ್​ ಅಪಘಾತಕ್ಕೆ ಒಳಗಾಗಿದ್ದು ಅವರ ಅಭಿಮಾನಿಗಳಿಗೆ ಕಹಿ ಸುದ್ದಿ ಕೇಳಿಬಂದಿದೆ. ಶುಕ್ರವಾರ (ಸೆ.10) ರಾತ್ರಿ 8 ಗಂಟೆಗೆ ಸ್ಪೋರ್ಟ್ಸ್​ ಬೈಕ್​ನಲ್ಲಿ ಚಲಿಸುತ್ತಿದ್ದಾಗ ಸ್ಕಿಡ್​ ಆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬಲಗಣ್ಣು, ಎದೆ ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಯಿ ಧರಮ್​ ತೇಜ್​ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂದು ವರದಿ ಆಗಿದ್ದು, ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ ಈ ನಡುವೆ ಕುಟುಂಬದವರು ಮತ್ತು ಆಪ್ತರು ಬೇರೆ ರೀತಿ ಹೇಳಿಕೆ ನೀಡುತ್ತಿದ್ದಾರೆ.

ಸಾಯಿ ಧರಮ್​ ತೇಜ್​ ಆರೋಗ್ಯದ ಬಗ್ಗೆ ಪವನ್​ ಕಲ್ಯಾಣ್​ ಪ್ರತಿಕ್ರಿಯೆ ನೀಡಿದ್ದಾರೆ. ‘ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರೂ ಕೂಡ ಹೆದರುವಂಥದ್ದು ಏನೂ ಇಲ್ಲ. ಆಮೇಲೆ ಎಲ್ಲವೂ ಗೊತ್ತಾಗಲಿದೆ’ ಎಂದು ಅವರು ಹೇಳಿದ್ದಾರೆ. ‘ಎರಡು ದಿನದ ಬಳಿಕ ಪೂರ್ಣ ಗುಣಮುಖ ಆಗಲಿದ್ದಾರೆ. ಗಂಭೀರ ಪರಿಸ್ಥಿತಿ ಏನಿಲ್ಲ’ ಎಂದು ಅಲ್ಲು ಅರವಿಂದ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ಭೀಕರ ಅಪಘಾತಕ್ಕೆ ತುತ್ತಾದ ನಟ ಸಾಯಿ ಧರಂ ತೇಜ್: ಅತಿವೇಗದಲ್ಲಿ ಸ್ಪೋರ್ಟ್ಸ್​ ಬೈಕ್​ ಓಡಿಸಿದ್ದೇ ಕಾರಣ ಎಂಬ ಶಂಕೆ

‘ಅಂದು ನನ್ನ ಜೀವನ ಮುಗಿಯಿತು ಅಂದುಕೊಂಡಿದ್ದೆ’; ಭೀಕರ ಅಪಘಾತ ನೆನಪಿಸಿಕೊಂಡ ಮಂಜು ಪಾವಗಡ

Published on: Sep 11, 2021 09:57 AM