ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
India vs Pakistan U19 Asia Cup final: ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಏಕೆಂದರೆ ಲೀಗ್ ಹಂತದಲ್ಲೇ ಪಾಕಿಸ್ತಾನ್ ತಂಡಕ್ಕೆ ಹೀನಾಯ ಸೋಲುಣಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.
ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಫೈನಲ್ ಪಾಕಿಸ್ತಾನ್ ತಂಡದ ಆರಂಭಿಕ ದಾಂಡಿಗ ಸಮೀರ್ ಮಿನ್ಹಾಸ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡಕ್ಕೆ ಸಮೀರ್ ಮಿನ್ಹಾಸ್ ಉತ್ತಮ ಆರಂಭ ಒದಗಿಸಿದರು.
ಆರಂಭದಿಂದಲೇ ಅತ್ಯುತ್ತಮ ಹೊಡೆತಗಳೊಂದಿಗೆ ಗಮನ ಸೆಳೆದ ಸಮೀರ್ ಮಿನ್ಹಾಸ್ ಕೇವಲ 71 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸಮೀರ್ 113 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 17 ಫೋರ್ಗಳೊಂದಿಗೆ 172 ರನ್ ಬಾರಿಸಿದರು.
ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 347 ರನ್ ಕಲೆಹಾಕಿದೆ. ಅದರಂತೆ ಈ ಪಂದ್ಯದಲ್ಲಿ ಗೆಲ್ಲಲು ಟೀಮ್ ಇಂಡಿಯಾ 348 ರನ್ಗಳಿಸಬೇಕಿದೆ.
ಭಾರತ ಅಂಡರ್-19 ಪ್ಲೇಯಿಂಗ್ 11: ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ , ಆರೋನ್ ಜಾರ್ಜ್ , ವಿಹಾನ್ ಮಲ್ಹೋತ್ರಾ , ವೇದಾಂತ್ ತ್ರಿವೇದಿ , ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್) , ಕಾನಿಷ್ಕ್ ಚೌಹಾಣ್ , ಹೆನಿಲ್ ಪಟೇಲ್ , ಖಿಲನ್ ಪಟೇಲ್ , ದೀಪೇಶ್ ದೇವೇಂದ್ರನ್ , ಕಿಶನ್ ಕುಮಾರ್ ಸಿಂಗ್.
ಪಾಕಿಸ್ತಾನ್ ಅಂಡರ್-19 ಪ್ಲೇಯಿಂಗ್ 11: ಸಮೀರ್ ಮಿನ್ಹಾಸ್, ಹಮ್ಝ ಝಹೂರ್ (ವಿಕೆಟ್ ಕೀಪರ್) , ಉಸ್ಮಾನ್ ಖಾನ್ ,
ಅಹ್ಮದ್ ಹುಸೇನ್ , ಫರ್ಹಾನ್ ಯೂಸುಫ್ (ನಾಯಕ) , ಹುಜೈಫಾ ಅಹ್ಸಾನ್ , ನಿಖಾಬ್ ಶಫೀಕ್ , ಮೊಹಮ್ಮದ್ ಶಯಾನ್ , ಅಬ್ದುಲ್ ಸುಭಾನ್ , ಮೊಹಮ್ಮದ್ ಸಯ್ಯಮ್ , ಅಲಿ ರಾಝ.
Published on: Dec 21, 2025 01:52 PM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

