AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂಟ್ಯೂಬರ್ ಸಮೀರ್ ಅಮ್ಮನ ಜೊತೆ ಆಗಾಗ್ಗೆ ಮಾತಾಡುತ್ತಿದ್ದೆ, ಸಮೀರ್ ಜೊತೆ ಇಲ್ಲ: ಆಶಾ, ನೆರೆಮನೆಯವರು

ಯೂಟ್ಯೂಬರ್ ಸಮೀರ್ ಅಮ್ಮನ ಜೊತೆ ಆಗಾಗ್ಗೆ ಮಾತಾಡುತ್ತಿದ್ದೆ, ಸಮೀರ್ ಜೊತೆ ಇಲ್ಲ: ಆಶಾ, ನೆರೆಮನೆಯವರು

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2025 | 6:31 PM

Share

ಸಮೀರ್ ಕುಟುಂಬ ಬಳ್ಳಾರಿ ಕಡೆಯವರು ಎಂದು ಹೇಳುವ ಆಶಾ, ಅಫ್ರೋಜಾ ಜೊತೆಯೂ ಹೆಚ್ಚು ಮಾತಾಡುತ್ತಿರಲಿಲ್ಲ ಎಂದು ಹೇಳುತ್ತಾರೆ. ಪಾಪುವನ್ನು ಕೆಳಗೆ ಬಿಡಲು ಬಂದಾಗ ಅವರು ಸಿಕ್ಕರೆ ಮಾತಾಡುತ್ತಿದ್ದರಂತೆ. ಇವತ್ತು ಬೆಳಗೆ ಸಮೀರ್​ನನ್ನು ಬಂಧಿಸಲು 4-5 ಜನ ಪೊಲೀಸರು ಬಂದಿದ್ದರು ಎಂದು ಅವರು ಹೇಳುತ್ತಾರೆ. ಅದರೆ ಪೊಲೀಸರು ಬಂದಾಗ ಸಮೀರ್ ಮನೆಯಲ್ಲಿರಲಿಲ್ಲ ಎಂಬ ಸಂಗತಿ ಈಗಾಗಲೇ ವರದಿಯಾಗಿದೆ.

ಬೆಂಗಳೂರು, ಆಗಸ್ಟ್ 21: ಯೂಟ್ಯೂಬರ್ ಸಮೀರ್ (YouTuber Sameer) ರಾಜ್ಯದಲ್ಲ್ಲಿ ಈಗ ಹೆಸರುವಾಸಿಯಾಗಿದ್ದಾರೆ, ಯಾಕೆ ಅಂತ ಕನ್ನಡಿಗರಿಗೆ ಗೊತ್ತಿದೆ. ಸಮೀರ್ ಎಂಥವನು ಅವರ ಚುಟವಟಿಕೆಗಳು ಏನಾಗಿದ್ದವು ಅನ್ನೋದು ಅವರ ನೆರೆಹೊರೆಯವರಾಗಿರುವ ಆಶಾ ಅವರಿಗೆ ಗೊತ್ತಿಲ್ಲ. ಸಮೀರ್ ವಾಸವಾಗಿರುವ ಮನೆ ಸುತ್ತಮುತ್ತ 9 ಮನೆಗಳಿವೆ, ಹೆಚ್ಚಿನವರು ತಮಿL ಮತ್ತು ಮಲೆಯಾಳಂ ಮಾತಾಡುವ ಕಾರಣ ಕನ್ನಡ ಚೆನ್ನಾಗಿ ಮಾತಾಡುವ ಸಮೀರ್ ತಾಯಿ ಅಫ್ರೋಜ ಜೊತೆ ಆಶಾ ಅವರಿಗೆ ಸ್ನೇಹ ಬೆಳೆದಿತ್ತು. ಸಮೀರ್​ ಜೊತೆ ಆಶಾ ಮಾತಾಡಿಲ್ಲ, ಅವರ ಹೊಗೋದು ಬರೋದು ಕಾಣುತಿತ್ತಂತೆ. ಸಮೀರ್ ಸ್ವಭಾವ, ಏನು ಕೆಲಸ ಮೊದಲಾದ ಯಾವ ಸಂಗತಿಯೂ ತನಗೆ ಗೊತ್ತಿಲ್ಲ ಎಂದು ಆಶಾ ಹೇಳುತ್ತಾರೆ.

ಇದನ್ನೂ ಓದಿ:  ಧರ್ಮಸ್ಥಳ ಕೇಸ್​: ಯೂಟ್ಯೂಬರ್‌ ಬಂಧನಕ್ಕೆ ಬಲೆ ಬೀಸಿದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಸಮೀರ್ ಪರಾರಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ