Samsung Galaxy Z Flip 5: ಸ್ಯಾಮ್​ಸಂಗ್ ಸ್ಟೈಲಿಶ್ ಫ್ಲಿಪ್​ ಫೋನ್​ ನೋಡಿ..

|

Updated on: Jul 28, 2023 | 7:30 AM

ಸ್ಯಾಮ್​ಸಂಗ್ ಝೀ ಫೋಲ್ಡ್ ಮತ್ತು ಫ್ಲಿಪ್ ಸರಣಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5 ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. GALAXY Z FLIP5 ಹೊಸ ಫ್ಲೆಕ್ಸ್ ವಿಂಡೋದೊಂದಿಗೆ ಬಂದಿರುವುದು ವಿಶೇಷವಾಗಿದೆ. ಜತೆಗೆ ಫ್ಲಿಪ್ ಸರಣಿಯಲ್ಲಿ ಈ ಬಾರಿ ಅತ್ಯಂತ ವೈವಿಧ್ಯಮಯ ಕ್ಯಾಮರಾ ಮತ್ತು ಫ್ಲೆಕ್ಸಿಕ್ಯಾಮ್ ಮೂಲಕ ಆಕರ್ಷಕ ಹ್ಯಾಂಡ್ಸ್-ಫ್ರೀ ಫೋಟೋ ಸೆರೆ ಹಿಡಿಯುವ ಅನುಕೂಲ ಕಲ್ಪಿಸಲಾಗಿದೆ.

ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆದ ಈ ವರ್ಷದ ಬಹುದೊಡ್ಡ ಸ್ಯಾಮ್​ಸಂಗ್ ಗ್ಯಾಲಕ್ಸಿ ಅನ್​ಪ್ಯಾಕ್ಡ್ ಈವೆಂಟ್​ನಲ್ಲಿ ಸ್ಯಾಮ್​ಸಂಗ್ ಝೀ ಫೋಲ್ಡ್ ಮತ್ತು ಫ್ಲಿಪ್ ಸರಣಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5 ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. GALAXY Z FLIP5 ಹೊಸ ಫ್ಲೆಕ್ಸ್ ವಿಂಡೋದೊಂದಿಗೆ ಬಂದಿರುವುದು ವಿಶೇಷವಾಗಿದೆ. ಜತೆಗೆ ಫ್ಲಿಪ್ ಸರಣಿಯಲ್ಲಿ ಈ ಬಾರಿ ಅತ್ಯಂತ ವೈವಿಧ್ಯಮಯ ಕ್ಯಾಮರಾ ಮತ್ತು ಫ್ಲೆಕ್ಸಿಕ್ಯಾಮ್ ಮೂಲಕ ಆಕರ್ಷಕ ಹ್ಯಾಂಡ್ಸ್-ಫ್ರೀ ಫೋಟೋ ಸೆರೆ ಹಿಡಿಯುವ ಅನುಕೂಲ ಕಲ್ಪಿಸಲಾಗಿದೆ. ಸುಧಾರಿತ ನೈಟೊಗ್ರಫಿ ಫೀಚರ್ಸ್ ಮೂಲಕ ರಾತ್ರಿಯಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಅತ್ಯಲ್ಪ ಬೆಳಕಿನಲ್ಲಿಯೂ ಸ್ಷಷ್ಟವಾಗಿ ಸೆರೆಹಿಡಿಯಬಹುದು. ದೂರದಿಂದಲೂ ಫೋಟೋಗಳು ಡಿಜಿಟಲ್ 10ಎಕ್ಸ್ ಝೂಮ್ ನಿಂದ ಅತ್ಯಂತ ಸ್ಪಷ್ಟವಾಗಿರುತ್ತವೆ ಎಂದು ಸ್ಯಾಮ್​ಸಂಗ್ ಹೇಳಿದೆ. ಹೆಚ್ಚಿನ ಡೀಟೇಲ್ಸ್ ಇಲ್ಲಿದೆ..

Follow us on