‘ಉಪಾಧ್ಯಕ್ಷ’ ಚಿತ್ರದಿಂದ ಹೀರೋ ಆದ ಚಿಕ್ಕಣ್ಣ; ಈವರೆಗಿನ ಸಿನಿಜರ್ನಿ ಮೆಲುಕು ಹಾಕಿದ ಹಾಸ್ಯನಟ

Edited By:

Updated on: Jun 16, 2022 | 1:37 PM

Upadhyaksha Movie: ಇಷ್ಟು ದಿನ ಹೀರೋ ಸ್ನೇಹಿತನಾಗಿ ನಟಿಸುತ್ತಿದ್ದ ಚಿಕ್ಕಣ್ಣ ಈಗ ತಾವೇ ಹೀರೋ ಪಟ್ಟಕ್ಕೆ ಏರಿದ್ದಾರೆ. ಅವರ ಹೊಸ ಚಿತ್ರ ‘ಉಪಾಧ್ಯಕ್ಷ’ ಸೆಟ್ಟೇರಿದೆ.

ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಖ್ಯಾತಿ ಪಡೆದಿರುವ ಚಿಕ್ಕಣ್ಣ (Chikkanna) ಅವರು ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ಹೀರೋ ಆಗಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾ (Upadhyaksha Movie) ಮೂಲಕ ಅವರು ನಾಯಕನ ಪಟ್ಟ ಅಲಂಕರಿಸುತ್ತಿದ್ದಾರೆ. ಈ ಚಿತ್ರಕ್ಕೆ ಇಂದು (ಜೂನ್​ 16) ಮುಹೂರ್ತ ನೆರವೇರಿದೆ. ಈ ಖುಷಿಯ ಸಂದರ್ಭದಲ್ಲಿ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮ ಸಿನಿಮಾ ಜರ್ನಿ ಯಾವ ರೀತಿ ಸಾಗಿಬಂತು ಎಂಬುದನ್ನು ಅವರು ಮೆಲುಕು ಹಾಕಿದ್ದಾರೆ. ಉಮಾಪತಿ ಶ್ರೀನಿವಾಸ್​ ಗೌಡ ಅವರ ಬ್ಯಾನರ್​ ಮೂಲಕ ‘ಉಪಾಧ್ಯಕ್ಷ’ ಚಿತ್ರ ನಿರ್ಮಾಣ ಆಗುತ್ತಿದೆ. ಒಮ್ಮೆ ಹೀರೋ ಆದ ಬಳಿಕ ಸ್ಯಾಂಡಲ್​ವುಡ್​ನಲ್ಲಿ (Sandalwood) ಚಿಕ್ಕಣ್ಣ ಅವರು ಹೀರೋ ಆಗಿಯೇ ಮುಂದುವರಿಯುತ್ತಾರಾ? ಬೇರೆ ಪಾತ್ರಗಳನ್ನೂ ಒಪ್ಪಿಕೊಳ್ಳುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿದೆ ಉತ್ತರ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
TV9 Web

TV9 Kannada

Read More