AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಪುರುಷ-ಮಹಿಳೆ ಅನ್ನೋ ತಾರತಮ್ಯ? ವಿನಯ್ ವಿರುದ್ಧ ಸಿಡಿದೆದ್ದ ಸಂಗೀತಾ ಶೃಂಗೇರಿಬಿಗ್ ಬಾಸ್ ಮನೆಯಲ್ಲಿ ಪುರುಷ-ಮಹಿಳೆ ಅನ್ನೋ ತಾರತಮ್ಯ? ವಿನಯ್ ವಿರುದ್ಧ ಸಿಡಿದೆದ್ದ ಸಂಗೀತಾ ಶೃಂಗೇರಿ

ಬಿಗ್ ಬಾಸ್ ಮನೆಯಲ್ಲಿ ಪುರುಷ-ಮಹಿಳೆ ಅನ್ನೋ ತಾರತಮ್ಯ? ವಿನಯ್ ವಿರುದ್ಧ ಸಿಡಿದೆದ್ದ ಸಂಗೀತಾ ಶೃಂಗೇರಿ

ರಾಜೇಶ್ ದುಗ್ಗುಮನೆ
|

Updated on: Jan 03, 2024 | 8:31 AM

Share

ಮಹಿಳಾ ಸ್ಪರ್ಧಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಆದರೆ, ಇದನ್ನು ವಿನಯ್ ಒಪ್ಪಿಲ್ಲ. ಅವರು ಸಂಗೀತಾ ಜೊತೆ ಮಾತಿಗೆ ಇಳಿದಿದ್ದಾರೆ.

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಅನಿಸಿದ್ದನ್ನು ನೇರವಾಗಿ ಹೇಳೋದು ಅವರ ವ್ಯಕ್ತಿತ್ವ. ಈ ಕಾರಣದಿಂದಲೇ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿರುವ ಅನೇಕರಿಗೆ ಅವರನ್ನು ಕಂಡರೆ ಆಗೋದಿಲ್ಲ. ವಿನಯ್ ಜೊತೆ ಅವರು ದ್ವೇಷ ಕಟ್ಟಿಕೊಂಡಿದ್ದರು. ಹೊಸ ವರ್ಷದ ಸಂದರ್ಭದಲ್ಲಿ ಇಬ್ಬರೂ ಒಂದಾಗಿದ್ದರು. ಆದರೆ, ಇದು ಹೆಚ್ಚು ದಿನ ಉಳಿದಿಲ್ಲ. ಟಾಸ್ಕ್ ವಿಚಾರಕ್ಕೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಮಹಿಳಾ ಸ್ಪರ್ಧಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಆದರೆ, ಇದನ್ನು ವಿನಯ್ ಒಪ್ಪಿಲ್ಲ. ಅವರು ಸಂಗೀತಾ ಜೊತೆ ಮಾತಿಗೆ ಇಳಿದಿದ್ದಾರೆ. ಕಲರ್ಸ್ ಕನ್ನಡದಲ್ಲಿ ಇಂದು (ಜನವರಿ 3) ಈ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ ಶೋನ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More