Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್

ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್

ಮಂಜುನಾಥ ಸಿ.
|

Updated on: Oct 13, 2024 | 2:52 PM

ಕನ್ನಡದ ‘ಕೆಜಿಎಫ್ 2’ ಸಿನಿಮಾದಲ್ಲಿಯೂ ನಟಿಸಿರುವ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ನಿನ್ನೆಯಷ್ಟೆ ಮಂಗಳೂರಿಗೆ ಆಗಮಿಸಿದ್ದರು. ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಹುಲಿ ಕುಣಿತ ಊದು ಪೂಜೆಯಲ್ಲಿ ಭಾಗವಹಿಸಿದ ಸಂಜಯ್ ದತ್, ಹುಲಿ ಕುಣಿತ ನೋಡಿ ಖುಷಿ ಪಟ್ಟರು.

ಬಾಲಿವುಡ್​ನ ಹಲವಾರು ನಟರು ಕರ್ನಾಟಕದೊಂದಿಗೆ ಆಪ್ತ ಬಂಧ ಹೊಂದಿದ್ದಾರೆ. ಕರ್ನಾಟಕದ ಜನಪ್ರಿಯ ದೇವಾಲಯಗಳಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆಯುತ್ತಾರೆ. ಅದರಲ್ಲೂ ‘ಕಾಂತಾರ’ ಸಿನಿಮಾ ದೊಡ್ಡ ಹಿಟ್ ಆದ ಬಳಿಕವಂತೂ ಕರಾವಳಿ ಕರ್ನಾಟಕದ ಆಚರಣೆಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದೀಗ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ವಿವಿಧ ಹಬ್ಬಗಳ ಸಮಯ. ಸಂಜಯ್ ದತ್ ಅವರು ಹುಲಿ ಕುಣಿದ ಊದು ಪೂಜೆಗೆಂದು ನಿನ್ನೆಯಷ್ಟೆ ಮಂಗಳೂರಿಗೆ ಬಂದಿದ್ದರು. ಪೂಜೆಯಲ್ಲಿ ಭಾಗಿಯಾಗಿದ್ದ ನಟ ಸಂಜಯ್ ದತ್ ಹುಲಿ ಕುಣಿತ ನೋಡಿ ದಂಗಾದರು ಅಲ್ಲದೆ ಹುಲಿ ಕುಣಿತದ ಹಿನ್ನೆಲೆ ಸಂಗೀತ ಕೇಳಿ ತಲೆದೂಗಿದ್ದಾರೆ. ಸಂಜಯ್ ದತ್ ಅವರು ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಹ ಸಲ್ಲಿಸಿದ್ದಾರೆ. ದೇವಾಲಯದವರು ಸಂಜಯ್ ದತ್ ಅವರನ್ನು ಸನ್ಮಾನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ