30 ಸಿಕ್ಸ್, 24 ಫೋರ್: ಕೆಸಿಎಲ್ನಲ್ಲಿ ಸಂಜು ಸ್ಯಾಮ್ಸನ್ ಸಿಡಿಲಬ್ಬರ
Sanju Samson in KCL 2025: ಕೇರಳ ಕ್ರಿಕೆಟ್ ಲೀಗ್‌ನಲ್ಲಿ (KCL 2025) ಸಂಜು ಸ್ಯಾಮ್ಸನ್ ಸಿಡಿಲಬ್ಬರ ಮುಂದುವರೆದಿದೆ. ದ್ವಿತೀಯ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಸ್ಯಾಮ್ಸನ್ ಆ ಬಳಿಕ ಬ್ಯಾಕ್ ಟು ಬ್ಯಾಕ್ ಮೂರು ಹಾಫ್ ಸೆಂಚುರಿಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಷ್ಯಾಕಪ್ಗೆ ಭರ್ಜರಿ ಸಿದ್ಧತೆಯಲ್ಲಿದ್ದಾರೆ.
ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಸಂಜು ಸ್ಯಾಮ್ಸನ್ ಸಿಡಿಲಬ್ಬರ ಮುಂದುವರೆದಿದೆ. ಕೊಚ್ಚಿ ಬ್ಲೂ ಟೈಗರ್ಸ್ ಪರ ಕಣಕ್ಕಿಳಿಯುತ್ತಿರುವ ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಕೇವಲ 13 ರನ್ ಮಾತ್ರ ಕಲೆಹಾಕಿದ್ದರು. ಈ ಇನಿಂಗ್ಸ್ ಬಳಿಕ ಸಂಜು ಅಸಲಿಯಾಟ ಶುರು ಮಾಡಿದ್ದಾರೆ.
ಕೊಲ್ಲಂ ಸೈಲರ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಕೇವಲ 51 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 121 ರನ್ ಸಿಡಿಸಿದ್ದಾರೆ.
ಇದಾದ ಬಳಿಕ ತ್ರಿಶೂರ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದ ಸ್ಯಾಮ್ಸನ್ 46 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 89 ರನ್ ಬಾರಿಸಿದ್ದಾರೆ.
ಇನ್ನು ತಿರುವನಂತಪುರಂ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ 37 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 62 ರನ್ ಬಾರಿಸಿದ್ದಾರೆ.
ಅಲೆಪ್ಪಿ ರಿಪ್ಪಲ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟ್ನಿಂದ 9 ಸಿಕ್ಸ್ ಹಾಗೂ 2 ಫೋರ್ಗಳು ಮೂಡಿಬಂದಿವೆ. ಅಲ್ಲದೆ ಈ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ 83 ರನ್ ಬಾರಿಸಿದ್ದಾರೆ.
ಅಂದರೆ ಕಳೆದ ನಾಲ್ಕು ಇನಿಂಗ್ಸ್ಗಳಲ್ಲೂ ಸಂಜು ಸ್ಯಾಮ್ಸನ್ 50+ ಸ್ಕೋರ್ಗಳಿಸಿದ್ದಾರೆ. ಅಲ್ಲದೆ ಈ ವೇಳೆ ಅವರ ಬ್ಯಾಟ್ನಿಂದ ಸಿಡಿದಿರುವುದು ಬರೋಬ್ಬರಿ 30 ಸಿಕ್ಸ್ ಹಾಗೂ 24 ಫೋರ್ಗಳು. ಈ ಮೂಲಕ 5 ಇನಿಂಗ್ಸ್ಗಳಿಂದ ಒಟ್ಟು 368 ರನ್ಗಳಿಸಿ ಅಬ್ಬರಿಸಿದ್ದಾರೆ.
ಈ ಅಬ್ಬರದೊಂದಿಗೆ ಏಷ್ಯಾಕಪ್ಗೆ ಸಿದ್ಧರಾಗುತ್ತಿರುವ ಸಂಜು ಸ್ಯಾಮ್ಸನ್ ಕಡೆಯಿಂದ ಯುಎಇ ಪಿಚ್ನಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಅನ್ನು ನಿರೀಕ್ಷಿಸಬಹುದು.
