ಇಂದು ಸಂಕಷ್ಟ ಚತುರ್ಥಿ, ಕನಕದಾಸ ಜಯಂತಿ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ನವೆಂಬರ್ 8, 2025 ರ ದೈನಂದಿನ ರಾಶಿ ಭವಿಷ್ಯವನ್ನು ವಿವರಿಸಿದ್ದಾರೆ. ಗ್ರಹಗಳ ಸಂಚಾರ, ಶುಭ-ಅಶುಭ ಕಾಲ, ಸಂಕಷ್ಟ ಚತುರ್ಥಿ ಮತ್ತು ಕನಕದಾಸ ಜಯಂತಿಯಂತಹ ವಿಶೇಷ ದಿನಗಳ ಬಗ್ಗೆ ಮಾಹಿತಿ ಇದೆ. ಮೃಗಶಿರ ನಕ್ಷತ್ರದಲ್ಲಿ ಚಂದ್ರನ ಸಂಚಾರದೊಂದಿಗೆ, 12 ರಾಶಿಗಳ ಆರ್ಥಿಕ, ಆರೋಗ್ಯ, ಉದ್ಯೋಗ ಮತ್ತು ವೈಯಕ್ತಿಕ ಜೀವನದ ಮೇಲಿನ ಪರಿಣಾಮಗಳ ಕುರಿತು ವಿವರವಾದ ಸಲಹೆಗಳನ್ನು ನೀಡಲಾಗಿದೆ.
2025ರ ನವೆಂಬರ್ 8ರ ಶನಿವಾರವಾಗಿರುವ ಇಂದು ಕನಕದಾಸರ ಜಯಂತಿ ಮತ್ತು ಸಂಕಷ್ಟ ಚತುರ್ಥಿ. ಸಂಕಷ್ಟ ಚತುರ್ಥಿಯಂದು ಉಪವಾಸ ಮಾಡಿ ಗಣಪತಿಯನ್ನು ಸ್ತುತಿಸುವ ಮೂಲಕ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಇಂದು ಬೆಳಗ್ಗೆ 9.7 ರಿಂದ 10.34 ರ ವರೆಗೆ ತನಕ ರಾಹುಕಾಲವಿರಲಿದೆ. ಹಾಗೆಯೇ, 1.30 ರಿಂದ 2.57 ರ ವರೆಗೆ ತನಕ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭ ಕಾಲವಿರುತ್ತದೆ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಕೃಷ್ಣ ಪಕ್ಷ, ತದಿಗೆ, ಮೃಗಶಿರ ನಕ್ಷತ್ರ, ಶಿವಯೋಗ ಮತ್ತು ಭದ್ರಕರಣ ಇರುವ ಈ ದಿನದ ದ್ವಾದಾಶ ರಾಶಿಗಳ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.
