AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಕ್ಟರ್‌ನಡಿ ಸಿಲುಕಿ ಉತ್ತರ ಪ್ರದೇಶದ 8 ವರ್ಷದ ಬಾಲಕ ಸಾವು

ಟ್ರಾಕ್ಟರ್‌ನಡಿ ಸಿಲುಕಿ ಉತ್ತರ ಪ್ರದೇಶದ 8 ವರ್ಷದ ಬಾಲಕ ಸಾವು

ಸುಷ್ಮಾ ಚಕ್ರೆ
|

Updated on:Nov 07, 2025 | 9:36 PM

Share

ಉತ್ತರ ಪ್ರದೇಶದ ಬಿಜ್ನೋರ್​​ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಪರಾರಿಯಾಗಿರುವ ಟ್ರಾಕ್ಟರ್ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಾಹನ ಮತ್ತು ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅತಿ ವೇಗದಲ್ಲಿ ಬಂದ ಟ್ರಾಕ್ಟರ್ ಮೂವರಿಗೂ ಡಿಕ್ಕಿ ಹೊಡೆದಿದೆ. ಇದರಿಂದ 8 ವರ್ಷದ ಬಾಲಕ ಸಾವನ್ನಪ್ಪಿ, ಉಳಿದ ಇಬ್ಬರಿಗೆ ಗಾಯಗಳಾಗಿವೆ.

ಬಿಜ್ನೋರ್, ನವೆಂಬರ್ 7: ಉತ್ತರ ಪ್ರದೇಶದ ಬಿಜ್ನೋರ್‌ನ ಕಿರಾತ್‌ಪುರದಲ್ಲಿ ನಡೆದ ಭೀಕರ ಅಪಘಾತದಲ್ಲಿ (Road Accident) 8 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ವೇಗವಾಗಿ ಬಂದ ಟ್ರಾಕ್ಟರ್ ಟ್ರಾಲಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಕೂಡ ಗಾಯಗೊಂಡಿದ್ದಾರೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಲಕ ಆ ಸ್ಥಳದಿಂದ ಪರಾರಿಯಾಗಿದ್ದಾನೆ.

ಅಲಿಮುದ್ದೀನ್ ಅವರ ಪತ್ನಿ ಅಸ್ಮಾ, ಅವರ ಸಹೋದರನ ಪತ್ನಿ ಗುಲ್ಶನ್ ಮತ್ತು ಸಲೀಂ ಅವರ ಮಗ 8 ವರ್ಷದ ಅಯಾನ್ ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದ್ದಕ್ಕೆ ಸ್ವೀಟ್ ಖರೀದಿಸಿ, ಅದನ್ನು ಹಂಚುತ್ತಿದ್ದರು. ಈ ವೇಳೆ ಅತಿ ವೇಗದಲ್ಲಿ ಬಂದ ಟ್ರಾಕ್ಟರ್ ಮೂವರಿಗೂ ಡಿಕ್ಕಿ ಹೊಡೆದಿದೆ. ಇದರಿಂದ 8 ವರ್ಷದ ಬಾಲಕ ಸಾವನ್ನಪ್ಪಿ, ಉಳಿದ ಇಬ್ಬರಿಗೆ ಗಾಯಗಳಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 07, 2025 08:41 PM