ಆರೋಗ್ಯದ ವಿಚಾರದಲ್ಲಿ ಆರಂಭದಲ್ಲೇ ನಿರ್ಲಕ್ಷ್ಯ ಮಾಡಿದ್ದ ಹರೀಶ್ ರಾಯ್
ನಟ ಹರೀಶ್ ರಾಯ್ ಅವರಿಗೆ ಕ್ಯಾನ್ಸರ್ ಇತ್ತು. ಆದರೆ ಅವರು ಆರಂಭದಲ್ಲಿ ಅದರ ಬಗ್ಗೆ ನಿರ್ಲಕ್ಷ್ಯ ಮಾಡಿದರು. ಗುರುವಾರ (ನವೆಂಬರ್ 6) ಅವರು ನಿಧನರಾದರು. ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಆ ಬಳಿಕ ಸಹೋದರಿ ವಿದ್ಯಾ ರಾಣಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಉಡುಪಿಯಲ್ಲಿ ನಟ ಹರೀಶ್ ರಾಯ್ ಅವರ ಅಂತ್ಯಕ್ರಿಯೆ (Harish Roy Funeral) ಮಾಡಲಾಗಿದೆ. ಕ್ಯಾನ್ಸರ್ (Cancer) ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ನ.6ರಂದು ನಿಧನರಾದರು. ಅಂತ್ಯಕ್ರಿಯೆ ಮುಗಿದ ಬಳಿಕ ಹರೀಶ್ ರಾಯ್ ಅವರ ಸಹೋದರಿ ವಿದ್ಯಾ ರಾಣಿ ಮಾತನಾಡಿದ್ದಾರೆ. ‘ಆರೋಗ್ಯವನ್ನು ಅವರು ನಿರ್ಲಕ್ಷ್ಯ ಮಾಡಿದರು. ಕೆಜಿಎಫ್ ಸಿನಿಮಾ ಮಾಡುವಾಗಲೇ ಅವರಿಗೆ ಉಸಿರಾಡಲು ಕಷ್ಟ ಆಗುತ್ತಿತ್ತು. ಉಡುಪಿಯಲ್ಲೇ ಚಿಕಿತ್ಸೆ ಕೊಡಿಸೋಣ ಅಂತ ನಾವು ಹೇಳಿದ್ದೆವು. ಆರಾಮಾಗಿ ನೋಡೋಣ ಅಂತ ಅವರು ನಿರ್ಲಕ್ಷ್ಯ ಮಾಡಿದರು. ಅನಾರೋಗ್ಯದ ಬಗ್ಗೆ ಅವರು ಸೀಕ್ರೆಟ್ ಮಾಡಿದರು. ಯಾರಿಗಾದರೂ ಏನಾದರೂ ಸಮಸ್ಯೆ ಇದ್ದರೆ ಮೊದಲೇ ತೋರಿಸಿ. ಹಾಗೆ ಬಿಡಬೇಡಿ. ಈಗ ನೋಡಿ ಅವರು ನಮ್ಮ ಜೊತೆ ಇಲ್ಲ’ ಎಂದು ವಿದ್ಯಾ ರಾಣಿ ಅವರು ಕಣ್ಣೀರು ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

