ಇದನ್ನು ನೋಡಿ ಹುಡುಗಿಯರು ಬುದ್ಧಿ ಕಲಿಯಬೇಕು: ‘ಐ ಆ್ಯಮ್ ಗಾಡ್’ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ
ರವಿ ಗೌಡ ಅವರು ‘ಐ ಆ್ಯಮ್ ಗಾಡ್’ ಚಿತ್ರದಲ್ಲಿ ತೋರಿಸಿರುವ ಕಹಾನಿ ನೋಡಿ ಜನರು ಫಿದಾ ಆಗಿದ್ದಾರೆ. ಇಂದು (ನ.7) ಈ ಚಿತ್ರ ಬಿಡುಗಡೆ ಆಗಿದ್ದು, ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕಾನೂನು ದುರ್ಬಳಕೆ ಮಾಡಿಕೊಳ್ಳುವ ಹುಡುಗಿಯರ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದೆ.
ನಟ, ನಿರ್ದೇಶಕ ರವಿ ಗೌಡ ಅವರು ‘ಐ ಆ್ಯಮ್ ಗಾಡ್’ (I Am God) ಸಿನಿಮಾದಲ್ಲಿ ತೋರಿಸಿರುವ ಕಥೆ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇಂದು (ನವೆಂಬರ್ 7) ಈ ಸಿನಿಮಾ ತೆರೆಕಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕರು ಅನಿಸಿಕೆ ಹಂಚಿಕೊಂಡಿದ್ದಾರೆ. ಕಾನೂನು ದುರ್ಬಳಕೆ ಮಾಡಿಕೊಳ್ಳುವ ಮಹಿಳೆಯರ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ‘ಈ ಸಿನಿಮಾ ನೋಡಿ ಹುಡುಗಿಯರು ಬುದ್ದಿ ಕಲಿಯಬೇಕು’ ಎಂದು ಪ್ರೇಕ್ಷಕರೊಬ್ಬರು ಹೇಳಿದ್ದಾರೆ. ‘ಲವ್ ಮಾಡಿದರೆ ಕೊನೆಯಲ್ಲಿ ನೋವು’ ಎಂದು ಕೂಡ ಪ್ರೇಕ್ಷಕರು ಹೇಳಿದ್ದಾರೆ. ಒಟ್ಟಿನಲ್ಲಿ ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ಪ್ರತಿಕ್ರಿಯೆ ನೀಡಿದ ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

