AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

I Am God Review: ರಿಯಲ್ ಸ್ಟಾರ್ ಫ್ಯಾನ್ಸ್ ಇಷ್ಟಪಡುವಂತಿದೆ ಉಪ್ಪಿ ಶಿಷ್ಯನ ‘ಎ’ ಫ್ಲೇವರ್ ಸಿನಿಮಾ

I Am God Review: ರಿಯಲ್ ಸ್ಟಾರ್ ಫ್ಯಾನ್ಸ್ ಇಷ್ಟಪಡುವಂತಿದೆ ಉಪ್ಪಿ ಶಿಷ್ಯನ ‘ಎ’ ಫ್ಲೇವರ್ ಸಿನಿಮಾ
I Am God Movie Review
ಐ ಆ್ಯಮ್ ಗಾಡ್
A
  • Time - 159 Minutes
  • Released - November 7, 2025
  • Genre - Romantic, Thriller
Cast - ರವಿ ಗೌಡ, ವಿಜೇತಾ ಪರೀಕ್, ಪಿ. ರವಿಶಂಕರ್, ಅವಿನಾಶ್, ಅರುಣಾ ಬಾಲರಾಜ್, ನಿರಂಜನ್ ಕುಮಾರ್ ಮುಂತಾದವರು.
Director - ರವಿ ಗೌಡ
3.5
Critic's Rating
ಮದನ್​ ಕುಮಾರ್​
|

Updated on: Nov 07, 2025 | 5:11 PM

Share

‘ಐ ಆ್ಯಮ್ ಗಾಡ್.. ಗಾಡ್ ಈಸ್ ಗ್ರೇಟ್’ ಎಂಬ ಡೈಲಾಗ್ ಕೇಳಿದರೆ ಥಟ್ ಅಂತ ‘ಎ’ ಸಿನಿಮಾ ನೆನಪಾಗುತ್ತದೆ. ಸಿನಿಮಾಗೆ ‘ಎ’ ಪ್ರಮಾಣ ಪತ್ರ ಸಿಕ್ಕರೆ ಫ್ಯಾಮಿಲಿ ಪ್ರೇಕ್ಷಕರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಭಯಪಡುವ ನಿರ್ದೇಶಕರ ನಡುವೆ ಧೈರ್ಯವಾಗಿ ತಮ್ಮ ಸಿನಿಮಾಗೆ ‘ಎ’ ಎಂದು ಹೆಸರಿಟ್ಟು ಗೆದ್ದು ತೋರಿಸಿದವರು ಉಪೇಂದ್ರ. ಕನ್ನಡದಲ್ಲಿ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಅವರಂತಹ ಖ್ಯಾತ ನಿರ್ದೇಶಕರಿಗೂ ಉಪೇಂದ್ರ ಸ್ಫೂರ್ತಿ. ಈಗ ಉಪೇಂದ್ರ ಅವರ ಶಿಷ್ಯ ರವಿ ಗೌಡ (Ravi Gowda) ‘ಐ ಆ್ಯಮ್ ಗಾಡ್’ ಸಿನಿಮಾ ಮಾಡಿದ್ದಾರೆ. ಈ ಚಿತ್ರ ನೋಡಿದವರಿಗೆ ‘ಎ’ ಸಿನಿಮಾದ ಫ್ಲೇವರ್ ಕಾಣಿಸಿದೆ. ಹಾಗಾದರೆ ‘ಐ ಆ್ಯಮ್ ಗಾಡ್’ (I Am God Movie) ಚಿತ್ರ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ.

‘ಐ ಆ್ಯಮ್ ಗಾಡ್’ ಸಿನಿಮಾದಲ್ಲಿ ರವಿ ಗೌಡ ಅವರು ಹೀರೋ ಆಗಿ ನಟಿಸಿದ್ದಾರೆ. ನಿರ್ದೇಶನ ಕೂಡ ಅವರದ್ದೇ. ಈ ಮುಂಚೆ ಉಪೇಂದ್ರ ಜೊತೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಅಲ್ಲದೇ, ಉಪ್ಪಿ ಸಿನಿಮಾಗಳ ಪ್ರಭಾವ ಕೂಡ ರವಿ ಗೌಡ ಮೇಲೆ ಸಾಕಷ್ಟಿದೆ. ಹಾಗಾಗಿ ಉಪೇಂದ್ರ ಅವರ ಅಭಿಮಾನಿಗಳಿಗೆ ‘ಐ ಆ್ಯಮ್ ಗಾಡ್’ ಸಿನಿಮಾ ಸಖತ್ ಇಷ್ಟ ಆಗಲಿದೆ. ಈ ಸಿನಿಮಾಗೆ ರವಿ ಗೌಡ ಅವರು ಆಯ್ಕೆ ಮಾಡಿಕೊಂಡಿರುವ ಕಥೆ ಕೂಡ ಚೆನ್ನಾಗಿದೆ.

ಕಾನೂನು ತಮ್ಮ ಪರವಾಗಿದೆ ಎಂಬ ಒಂದೇ ಕಾರಣದಿಂದ ಅಮಾಯಕರ ಮೇಲೆ ಸುಳ್ಳು ಕೇಸ್ ಹಾಕಿ ದ್ವೇಷ ತೀರಿಸಿಕೊಳ್ಳುವ ಮಹಿಳೆಯರ ಬಗ್ಗೆ ‘ಐ ಆ್ಯಮ್ ಗಾಡ್’ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಗಂಭೀರವಾದ ವಿಷಯ ಆಗಿದ್ದರೂ ಕೂಡ ಅದನ್ನು ಬಹಳ ಮನರಂಜನಾತ್ಮಕವಾಗಿ ರವಿ ಗೌಡ ಅವರು ವಿವರಿಸಿದ್ದಾರೆ. ಅದಕ್ಕಾಗಿ ಅವರು ಲವ್ ಸ್ಟೋರಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೆಣೆದುಕೊಂಡಿದ್ದಾರೆ.

ಈ ಸಿನಿಮಾದ ಕಥಾನಾಯಕ ದೇವ ಒಬ್ಬ ಆ್ಯಂಗ್ರಿ ಎಂಗ್ ಮ್ಯಾನ್. ಆತ ಲವರ್ ಬಾಯ್ ಕೂಡ ಹೌದು. ಅವನ ಜೀವನದಲ್ಲಿ ಬಿಂದು ಎಂಬ ಹುಡುಗಿಯ ಪ್ರವೇಶ ಆಗುತ್ತದೆ. ಯಾರಿಗೂ ಹೆದರದೇ ಕಾಲೇಜ್ ಕ್ಯಾಂಪಸ್​​ನಲ್ಲಿ ಖಲ್ಲಂ ಖುಲ್ಲಾ ಲವ್ ಮಾಡುವ ದೇವ ಮತ್ತು ಬಿಂದು ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಪ್ರೀತಿಯಲ್ಲಿ ಮುಳುಗುತ್ತಾರೆ. ಆದರೆ ಒಂದಷ್ಟು ಟ್ವಿಸ್ಟ್ ಎದುರಾದ ಬಳಿಕ ಅವರ ಪ್ರೀತಿಯಲ್ಲಿ ಬಿರುಗಾಳಿ ಬೀಸುತ್ತದೆ. ಇದೇ ಸಮಯಕ್ಕೆ ಸರಿಯಾಗಿ ನಗರದಲ್ಲಿ ಸರಣಿ ಕೊಲೆಗಳು ನಡೆಯುತ್ತವೆ. ಮಹಿಳೆಯರನ್ನು ಟಾರ್ಗೆಟ್ ಮಾಡಿದ ಒಬ್ಬ ಸೈಕೋ ಕಿಲ್ಲರ್ ಇಡೀ ಪೊಲೀಸ್ ಇಲಾಖೆಯ ನಿದ್ರೆ ಕೆಡಿಸುತ್ತಾನೆ. ದೇವ ಮತ್ತು ಬಿಂದು ಲವ್ ಸ್ಟೋರಿಗೂ, ಸರಣಿ ಕೊಲೆಗಳಿಗೂ ಏನಾದರೂ ಸಂಬಂಧ ಇದೆಯಾ ಎಂಬ ಕುತೂಹಲದಲ್ಲೇ ಸಿನಿಮಾ ಸಾಗುತ್ತದೆ.

‘ಈ ಪ್ರೀತಿ, ಪ್ರೇಮ ಎಲ್ಲ ಪುಸ್ತಕದ ಬದನೆಕಾಯಿ’ ಎಂದು ಉಪೇಂದ್ರ ಹೇಳಿದ ಡೈಲಾಗ್ ಈಗಲೂ ಫೇಮಸ್. ರವಿ ಗೌಡ ಅವರು ಕೂಡ ‘ಐ ಆ್ಯಮ್ ಗಾಡ್’ ಸಿನಿಮಾದಲ್ಲಿ ಅದೇ ಸಂದೇಶವನ್ನು ನೀಡಿದ್ದಾರೆ. ಆದರೆ ಸಂಪೂರ್ಣ ಹೊಸ ಕಥೆಯನ್ನು ಇಟ್ಟುಕೊಂಡು ಅವರು ಪ್ರೇಕ್ಷಕರ ಎದುರು ಬಂದಿದ್ದಾರೆ. ಅವರು ಬರೆದಿರುವ ಕಥೆ ಬಹಳ ವಿವರವಾಗಿದೆ. ಹಾಗಾಗಿ ಎಲ್ಲವನ್ನೂ ತೋರಿಸಿ ಮುಗಿಸುವ ಹೊತ್ತಿಗೆ 2 ಗಂಟೆ 38 ನಿಮಿಷ ಹಿಡಿಯುತ್ತದೆ. ತಾಳ್ಮೆ ಕಡಿಮೆ ಇರುವ ಪ್ರೇಕ್ಷಕರಿಗೆ ಇದು ಕೊಂಚ ಹೊರೆ ಆಗಬಹುದು. ಚಿತ್ರದ ಅವಧಿಯನ್ನು ಕಡಿಮೆ ಮಾಡುವತ್ತ ರವಿ ಗೌಡ ಗಮನ ಹರಿಸಬೇಕಿತ್ತು.

ಚಿತ್ರದ ಅವಧಿ ದೀರ್ಘ ಆಗಿದ್ದರೂ ಕೂಡ ರವಿ ಗೌಡ ಅವರು ಎಲ್ಲ ದೃಶ್ಯಗಳಿಗೆ ನ್ಯಾಯ ಒದಗಿಸಿದ್ದಾರೆ. ಆರಂಭದಲ್ಲಿ ಕಲರ್​ಫುಲ್ ಆದ ಕಾಲೇಜ್ ಕ್ಯಾಂಪಸ್ ಕಹಾನಿ ತೋರಿಸಿದ್ದಾರೆ. ಬಳಿಕ ಫ್ಯಾಮಿಲಿ ಅಂಶಗಳನ್ನು ತೋರಿಸಿದ್ದಾರೆ. ಹೊಡಿಬಡಿ ದೃಶ್ಯಗಳನ್ನು ಬಯಸುವ ಪ್ರೇಕ್ಷಕರಿಗೂ ಅವರು ಫುಲ್ ಮೀಲ್ಸ್ ನೀಡಿದ್ದಾರೆ. ರುಚಿಗೆ ತಕ್ಕಷ್ಟು ಕಾಮಿಡಿ ಕೂಡ ಇದೆ. ಸಿನಿಮಾದ ದ್ವಿತೀಯಾರ್ಧ ಸಂಪೂರ್ಣವಾಗಿ ಇನ್ನೊಂದು ಮಗ್ಗುಲಿಗೆ ಹೊರಳುತ್ತದೆ. ಸೆಕೆಂಡ್ ಹಾಫ್​​ನಲ್ಲಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳೇ ಹೆಚ್ಚು ಆವರಿಸಿಕೊಂಡಿವೆ.

ಎರಡು ಶೇರ್ ಇರುವ ಪಾತ್ರವನ್ನು ರವಿ ಗೌಡ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ವಿಜೇತ್ ಪರೀಕ್ ಕೂಡ ಮೈ ಚಳಿ ಬಿಟ್ಟು ನಟಿಸಿದ್ದಾರೆ. ‘ಎ’ ಸಿನಿಮಾ ರೀತಿಯೇ ‘ಐ ಆ್ಯಮ್ ಗಾಡ್’ ಸಿನಿಮಾದಲ್ಲಿ ಕೂಡ ಹೀರೋಯಿನ್ ಪಾತ್ರಕ್ಕೆ ಬಹಳ ಮಹತ್ವ ಇದೆ. ನಟ ಪಿ. ರವಿಶಂಕರ್ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ. ಹೀರೋ ರೀತಿ ಅವರ ಪಾತ್ರಕ್ಕೆ ಕೂಡ ಶಿಳ್ಳೆ, ಚಪ್ಪಾಳೆ ಸಿಗುತ್ತದೆ.

ಇದನ್ನೂ ನೋಡಿ: ‘ಐ ಆ್ಯಮ್ ಗಾಡ್’ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಮೇಕಿಂಗ್ ವಿಚಾರದಲ್ಲಿ ರವಿ ಗೌಡ ಅವರು ಎಲ್ಲಿಯೂ ರಾಜಿ ಆಗಿಲ್ಲ. ಕಥೆಗೆ ಬೇಕಾದ ಎಲ್ಲವನ್ನೂ ಅವರು ನೀಡಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ, ಜಿತಿನ್ ದಾಸ್ ಅವರ ಛಾಯಾಗ್ರಹಣದಿಂದ ಸಿನಿಮಾದ ಮೆರುಗು ಹೆಚ್ಚಿದೆ. ಯುವಜನತೆಗೆ ಬೇಗ ಕನೆಕ್ಟ್ ಆಗುವ ರೀತಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಸೆನ್ಸಾರ್ ಮಂಡಳಿ ಈ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಿದೆ. ಅದಕ್ಕೆ ತಕ್ಕಂತೆ ಲವ್ ಸೀನ್, ಭಾಷೆಯ ಬಳಕೆ, ರಕ್ತಪಾತ ಎಲ್ಲವೂ ಈ ಸಿನಿಮಾದಲ್ಲಿದೆ. ಆದರೆ ಯಾವುದನ್ನೂ ಕೂಡ ಬೇಕಂತಲೇ ವಿಜೃಂಭಿಸಿಲ್ಲ. ಅದು ಸಹ ಈ ಸಿನಿಮಾದ ಪ್ಲಸ್ ಪಾಯಿಂಟ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ