ಸ್ಯಾಂಟ್ರೋ ರವಿಯ ಆರೋಗ್ಯದಲ್ಲಿ ಏರುಪೇರು, ಮೈಸೂರಿನ ಕೆ ಅರ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jan 17, 2023 | 5:17 PM

ಈ ಹಿನ್ನೆಲೆಯಲ್ಲಿ ಅವನನ್ನು ಪೊಲೀಸ್ ಭದ್ರತೆಯೊಂದಿಗೆ ನಗರದ ಕೆ ಆರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆಯ ಬಳಿಕ ಸಿಐಡಿ ಅವನನ್ನು ವಶಕ್ಕೆ ಪಡೆದಿದೆ ಅಂತ ಗೊತ್ತಾಗಿದೆ.

ಮೈಸೂರು:  ಸ್ಯಾಂಟ್ರೋ ರವಿಯ (Santro Ravi) ಆರೋಗ್ಯ ಸರಿಯಿಲ್ಲ ಎಂದು ಅವನನ್ನು ಗುಜರಾತ್ ನಲ್ಲಿ ಬಂಧಿಸಿ ಮೈಸೂರಿಗೆ ಕರೆತಂದ ದಿನವೇ ಎಡಿಜಿಪಿ ಅಲೋಕ್ ಕುಮಾರ (Alok Kumar) ಹೇಳಿದ್ದರು. ಅವನು ಗಂಟೆಗೊಮ್ಮೆ ಇನ್ಸುಲಿನ್ ತೆಗೆದುಕೊಳ್ಳುತ್ತಾನೆ ಅಂತಲೂ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದರು. ಮೈಸೂರಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿರುವ (judicial custody) ರವಿಗೆ ಇಂದು ಅರೋಗ್ಯದಲ್ಲಿ ಏರುಪೇರಾಗಿದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಅವನನ್ನು ಪೊಲೀಸ್ ಭದ್ರತೆಯೊಂದಿಗೆ ನಗರದ ಕೆ ಆರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆಯ ಬಳಿಕ ಸಿಐಡಿ ಅವನನ್ನು ವಶಕ್ಕೆ ಪಡೆದಿದೆ ಅಂತ ಗೊತ್ತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More