ನಾನ್-ವೆಜ್ ವಿಚಾರದಲ್ಲಿ ಅನು ಪ್ರಭಾಕರ್ಗೆ ರೇಗಿಸಿದ್ದ ಪುನೀತ್ ರಾಜ್ಕುಮಾರ್; ನೆನಪಿನ ಪುಟ ತೆರೆದ ನಟಿ
Puneeth Rajkumar: ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್ಕುಮಾರ್ ಬಿಟ್ಟು ಹೋದ ನೆನಪುಗಳು ಅಪಾರ. ಅವರ ಜತೆ ಕಳೆದ ದಿನಗಳನ್ನು ಅನು ಪ್ರಭಾಕರ್ ಮೆಲುಕು ಹಾಕಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಸ್ನೇಹ ಜೀವಿ ಆಗಿದ್ದರು. ಅವರ ಜೊತೆ ಕೆಲಸ ಮಾಡಿದ ಎಲ್ಲರೂ ಅವರ ಆ ಗುಣವನ್ನು ಇಷ್ಟಪಡುತ್ತಿದ್ದರು. ‘ಜೇಮ್ಸ್’ (James Movie) ಸಿನಿಮಾದ ಶೂಟಿಂಗ್ ಅನುಭವವನ್ನು ನಟಿ ಅನು ಪ್ರಭಾಕರ್ ಅವರು ನೆನಪು ಮಾಡಿಕೊಂಡಿದ್ದಾರೆ. ‘ಸಾರಾ ವಜ್ರ’ ಸಿನಿಮಾ ಸಲುವಾಗಿ ಟಿವಿ9ಗೆ ನೀಡಿದ ಸಂದರ್ಶನದ ವೇಳೆ ಅನು ಪ್ರಭಾಕರ್ (Anu Prabhakar) ಅವರು ಅನೇಕ ವಿಚಾರಗಳ ಕುರಿತು ಮಾತನಾಡಿದ್ದಾರೆ. ‘ನಾನು ಮೊದಲಿನಿಂದಲೂ ಸಸ್ಯಹಾರಿ. ಅದಕ್ಕಾಗಿ ಪುನೀತ್ ರೇಗಿಸುತ್ತಿದ್ದರು. ನಾನ್-ವೆಜ್ ತಿನ್ನದೇ ಇರಲು ಹೇಗೆ ಸಾಧ್ಯ ಅಂತ ಕೇಳುತ್ತಿದ್ದರು. ನಾನು ತುಂಬ ಚೆನ್ನಾಗಿ ನಾನ್-ವೆಜ್ ಅಡುಗೆ ಮಾಡುತ್ತೇನೆ. ನಿಮಗಾಗಿ ಮಾಡಿಕೊಡುತ್ತೇನೆ ಅಂತ ನಾನು ಹೇಳ್ತಿದ್ದೆ’ ಎಂದು ಆ ದಿನಗಳ ನೆನಪಿನ ಪುಟವನ್ನು ತೆರೆದಿದ್ದಾರೆ ಅನು ಪ್ರಭಾಕರ್. ಇಂದು ಪುನೀತ್ ರಾಜ್ಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎಂಬುದು ಬೇಸರದ ಸಂಗತಿ. ಆಪ್ತರಿಗೆ, ಅಭಿಮಾನಿಗಳಿಗೆ ಅವರ ನೆನಪು ಪ್ರತಿ ದಿನವೂ ಕಾಡುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.