ಶನಿವಾರವೇ ನಡೆಯಲಿದೆ ಸರೆಗಮಪ ಫಿನಾಲೆ; ಮೊದಲೇ ನೋಡಲು ಹೀಗೆ ಮಾಡಿ
ಶನಿವಾರ ‘ಸರಿಗಮಪ’ ಫಿನಾಲೆ ನಡೆಯಲಿದೆ. ಇದರ ವೀಕ್ಷಣೆಗೆ ಫ್ಯಾನ್ಸ್ ಕಾದಿದ್ದಾರೆ. ಸದ್ಯ 6 ಮಂದಿ ಫಿನಾಲೆ ಹಂತ ತಲುಪಿದ್ದಾರೆ. ಶನಿವಾರ (ಜೂನ್ 3) ಫಿನಾಲೆ ನಡೆಯಲಿದೆ. ಮೊದಲೇ ಫಿನಾಲೆ ನೋಡಲು ಅವಕಾಶ ಇದೆ. ಆ ಬಗ್ಗೆ ಜೀ ಕನ್ನಡದವರ ಕಡೆಯಿಂದ ಮಾಹಿತಿ ಸಿಕ್ಕಿದೆ.
‘ಸರಿಗಮಪ’ (Saregamapa) ವೇದಿಕೆ ಫಿನಾಲೆಗೆ ಸಜ್ಜಾಗಿದೆ. ಇದು 21ನೇ ಸೀಸನ್ ಆಗಿದ್ದು, ಆರು ಸ್ಪರ್ಧಿಗಳು ಫಿನಾಲೆ ಹಂತ ತಲುಪಿದ್ದಾರೆ. ಶಿವಾನಿ, ರಶ್ಮಿ ಡಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಫಿನಾಲೆಯಲ್ಲಿ ಇರೋ ಸ್ಪರ್ಧಿಗಳು. ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಜಡ್ಜ್ಗಳಾಗಿದ್ದಾರೆ. ಶನಿವಾರ (ಜೂನ್ 7) ಸಂಜೆ 6 ಗಂಟೆಗೆ ಜೀ ಕನ್ನಡದಲ್ಲಿ ನೀವು ಫಿನಾಲೆ ವೀಕ್ಷಿಸಬಹುದು. ಆದರೆ, ಜೀ5 ಚಂದಾದಾರಾಗಿದ್ದರೆ ನೀವು ಸಂಜೆ 5 ಗಂಟೆಯಿಂದಲೇ ಫಿನಾಲೆ ನೋಡಬಹುದು ಮತ್ತು ಸ್ಪರ್ಧಿಗಳಿಗಳಿಗೆ ವೋಟ್ ಮಾಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos