‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಒಟ್ಟೂ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್ ಲಾಟರಿ

Updated on: Jun 09, 2025 | 8:44 AM

‘ಸರಿಗಮಪ’ ವಿನ್ನರ್ ಆಗಿ ಶಿವಾನಿ ಸ್ವಾಮಿ ಹೊರ ಹೊಮ್ಮಿದ್ದಾರೆ. ಬೀದರ್ ಮೂಲದ ಇವರು ಸಾಕಷ್ಟು ಗಮನ ಸೆಳೆದರು. ಇವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದು ಸುದ್ದಿ ಆಗಿದ್ದಾರೆ. ಇವರಿಗೆ ಸಿಕ್ಕ ಒಟ್ಟೂ ಹಣ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

‘ಸರಿಗಮಪ ಸೀಸನ್ 21’ರ (Saregamapa) ವಿನ್ನರ್ ಆಗಿ ಶಿವಾನಿ ಅವರು ಹೊರಹೊಮ್ಮಿದ್ದಾರೆ. ಹಲವು ತಿಂಗಳ ಕಾಲ ನಡೆದ ಸ್ಪರ್ಧೆಯಲ್ಲಿ ಅವರು ಗೆದ್ದು ಬೀಗಿದರು. ಅವರಿಗೆ ವೈಲ್ಟ್​ ಗೋಲ್ಡ್ ಕಡೆಯಿಂದ 15 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ನಾಣ್ಯ ಮತ್ತು ಆಕರ್ಷಕ ಟ್ರೋಫಿ ಸಿಕ್ಕಿದೆ. ಅಲ್ಲದೆ, ಸುಂದರ ಗಿಫ್ಟ್ ಹ್ಯಾಂಪರ್ ಹಾಗೂ ಆಕರ್ಷಕ ಅವಾರ್ಡ್ ಅವರ ಪಾಲಾಗಿದೆ. ಬಾಳು ಬೆಳಗುಂದಿಗೆ 5 ಲಕ್ಷ ರೂಪಾಯಿ, ದ್ಯಾಮೇಶ್​ಗೆ 3 ಲಕ್ಷ ರೂಪಾಯಿ, ಅಮೋಘ ವರ್ಷಗೆ 1 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.