ಚಿಕ್ಕಬಳ್ಳಾಪುರ ಬಳಿ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದವರ ನಡುವಿನ ಜಗಳ ಒಬ್ಬನ ಕೊಲೆಯಲ್ಲಿ ಪರ್ಯಾವಸನ
ಫ್ಯಾಮಿಲಿಗಳ ವಿಷಯದಲ್ಲಿ ರೆಸಾರ್ಟ್ ಉದ್ಯೋಗಿಗಳ ನಡುವೆ ಜಗಳ ಆರಂಭವಾಗಿದೆ ಮತ್ತು ಮೋಹನ್ ಎನ್ನುವವನನ್ನು ಉಳಿದ ನಾಲ್ವರು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ವರದರಾಜ್ ಹೇಳುತ್ತಾರೆ. ರೆಸಾರ್ಟ್ ಹೊರವಲಯದಲ್ಲಿ ಮೋಹನ್ನನ್ನು ಕೊಂದು ದೇಹವನ್ನು ತಂದು ಸ್ಟೋರ್ ರೂಮಲ್ಲಿ ಹಾಕಿದ್ದರಂತೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು, ಜೂನ್ 9: ವೀಕೆಂಡ್ ಬಂತು ಅಂತಾದರೆ ಅಪರಾಧಗಳು ನಡೆಯೋದು ಖಚಿತ ಅಂದುಕೊಳ್ಳಬೇಕು. ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಅಗಲಿಗುರ್ಕಿಯಲ್ಲಿರುವ ರೆಸಾರ್ಟ್ನಲ್ಲಿ (Resort near Chikkaballapura) ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಐದು ಜನರ ನಡುವೆ ಯಾವುದೋ ಕಾರಣಕ್ಕೆ ಜಗಳ ಶುರುವಾಗಿ, ಒಬ್ಬನ ಕೊಲೆಯಲ್ಲಿ ಪರ್ಯಾವಸನಗೊಂಡಿದೆ. ಕೊಲೆಯಾದ ವ್ಯಕ್ತಿಯನ್ನು ಮೋಹನ್ (34) ಎಂದು ಗುರುತಿಸಲಾಗಿದೆ. ರೆಸಾರ್ಟ್ ಮಾಲೀಕ ವರದರಾಜ್ ಹೇಳುವ ಹಾಗೆ, ಕೇವಲ ಒಂದೂವರೆ ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಅವರೆಲ್ಲ ನಿನ್ನೆ ರಾತ್ರಿ ಮದ್ಯ ಸೇವಿಸಿದ್ದರಂತೆ. ಐವರಲ್ಲಿ ಇಬ್ಬರು ರೆಸಾರ್ಟ್ನ ಸರ್ವಿಸ್ ವಿಭಾಗಲ್ಲಿ ಕೆಲಸ ಮಾಡುತ್ತಿದ್ದರೆ ಉಳಿದ ಮೂವರು ಹೌಸ್ ಕೀಪಿಂಗ್ನಲ್ಲಿದ್ದರು.
ಇದನ್ನೂ ಓದಿ: ಸುಶಾಂತ್ ಸಿಂಗ್ ಮಾಜಿ ಗೆಳತಿಯ ಹೊಸ ಉದ್ಯಮ, ‘ಕೊಲೆ‘ ಆರೋಪವೇ ಸ್ಪೂರ್ತಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ