ದಕ್ಕೆ ಮೀನುಗಾರಿಕಾ ಬಂದರು ಮುಸ್ಲಿಂ ಬಾಹುಳ್ಯದ ಪ್ರದೇಶ, ಸುಹಾಸ್ ಕೊಲೆಗೆ ಅಲ್ಲಿಂದ ಫಂಡಿಂಗ್ ಆಗಿರುವ ಸಾಧ್ಯತೆ: ವಿಹೆಚ್ಪಿ ಮುಖಂಡ
ಸುಹಾಸ್ ಕೊಲೆ ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಪಿಎಫ್ಐ ಕೈವಾಡವಿದೆ ಎಂದು ಆರೋಪಿಸುವ ಪ್ರದೀಪ್, ರಾಜ್ಯ ಪೊಲೀಸ್ ಇದುವರೆಗೆ 11 ಜನರನ್ನು ಬಂಧಿಸಿದೆ, ಆದರೆ ಹತ್ಯೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಪೊಲೀಸ್ ಕೇವಲ 3 ಜನರನ್ನು ಬಂಧಿಸಿತ್ತು, ಆದರೆ ಎನ್ಐಎ ಪ್ರಕರಣ ಕೈಗೆತ್ತಿಕೊಂಡ ಬಳಿಕ 28 ಜನರ ಬಂಧನವಾಗಿತ್ತು ಎಂದು ಪ್ರದೀಪ್ ಹೇಳಿದರು.
ಮಂಗಳೂರು, ಜೂನ್ 9: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಒಪ್ಪಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರದೀಪ್ ಸರಿಪಲ್ಲ ಸ್ವಾಗತಿಸಿದ್ದಾರೆ. ನಗರದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು, ದಕ್ಕೆಯಲ್ಲಿರುವ ಮೀನುಗಾರಿಕಾ ಬಂದರು ಒಂದು ಮುಸ್ಲಿಂ ಪ್ರಾಬಲ್ಯವುಳ್ಳ ಪ್ರದೇಶವಾಗಿದೆ, ಅಲ್ಲಿ ಪ್ರತಿದಿನ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ, ಹಾಗಾಗಿ ಸುಹಾಸ್ ಶೆಟ್ಟಿಯ ಕೊಲೆಗೆ ಬಂದರಿನಿಂದ ಫಂಡಿಂಗ್ ಆಗಿರುವ ಬಲವಾದ ಶಂಕೆಯಿದೆ, ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಈ ಆಯಾಮವನ್ನು ಸಹ ತನಿಖೆ ಮಾಡಬೇಕೆಂದು ಕೋರುತ್ತೇವೆ ಎಂದು ಪ್ರದೀಪ್ ಹೇಳಿದರು.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೊಲೆಯ ಪ್ರತೀಕಾರಕ್ಕೆ ಹಿಂದೂ ಸಮಾಜ ಕಾದು ಕೂತಿದೆ: ಭಜರಂಗದಳ ಮುಖಂಡ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos