ಕುಂಭಮೇಳ ಮತ್ತು ಬೆಂಗಳೂರು ಕಾಲ್ತುಳಿತ ಪ್ರಕರಣಗಳನ್ನು ಹೋಲಿಸುವುದು ಬೌದ್ಧಿಕ ದಿವಾಳಿತನದ ಪ್ರತೀಕ: ಪ್ರಲ್ಹಾದ್ ಜೋಶಿ
ಜೂನ್ ಮೂರರ ನಡುರಾತ್ರಿಯಿಂದ ಬೆಳಗಿನ ಜಾವದವರೆಗೆ ಕೆಲಸ ಮಾಡಿ ಪೊಲೀಸರು ಮನೆಗಳಿಗೆ ತೆರಳಿ ಮಲಗಿದ್ದಾರೆ, ಬೆಳಗಿನ ರೂಟೀನ್ ಬ್ರೀಫಿಂಗ್ ನೀಡಲು ಬರಲಾಗಲ್ಲ ಅಂತ ಬೆಂಗಳೂರು ಪೊಲೀಸ್ ಕಮೀಷನರ್ ಗೃಹ ಮಂತ್ರಿಗೆ ಸಂದೇಶ ನೀಡಿದ್ದಾರೆ, ಸಿಎಂ, ಡಿಸಿಎಂ ಮತ್ತು ಹೆಚ್ಎಂ; ಡಿಸಿಪಿಗಳ ಜೊತೆ ಮಾತಾಡಿ ಆರ್ಸಿಬಿ ಆಟಗಾರರಿರಗೆ ಸತ್ಕಾರ ಕೂಟವನ್ನು ಏರ್ಪಡಿಸಿ ದುರಂತಕ್ಕೆ ಕಾರಣವಾಗಿದ್ದಾರೆ ಎಂದು ಜೋಶಿ ಹೇಳಿದರು.
ಹುಬ್ಬಳ್ಳಿ, ಜೂನ್ 9: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಬೆಂಗಳೂರಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಮತ್ತು ಪಹಲ್ಗಾಮ್ ಉಗ್ರರ ದಾಳಿ ಹಾಗೂ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಸಂಭಸಿದ ಕಾಲ್ತುಳಿತಕ್ಕೆ ಹೋಲಿಕೆ ಮಾಡಿ ಕರ್ನಾಟಕದ ಮಂತ್ರಿಗಳು ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು. ಕುಂಭಮೇಳದಲ್ಲಿ ಯಾರದ್ದೋ ತಪ್ಪನಿಂದ ಕಾಲ್ತುಳಿತ ನಡೆದಿದ್ದು ಅದೊಂದು ಆಕಸ್ಮಿಕ, ಆದರೆ ಬೆಂಗಳೂರಲ್ಲಿ ನಡೆದ ದುರಂತಕ್ಕೆ ಸರಕಾರದ ಮೂಖರ್ತನವೇ ಕಾರಣ ಎಂದು ಹೇಳಿದ ಜೋಶಿ, ಮಾನ-ಮರ್ಯಾದೆ ಮತ್ತು ನಾಚಿಕೆಯಿಲ್ಲದೆ ಎರಡನ್ನು ಹೋಲಿಸುವ ಪ್ರಯತ್ನ ನಡೆದಿದೆ ಎಂದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು: ಪ್ರಶಾಂತ್ ಮನ ಮಿಡಿಯುವ ಮಾತು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು

‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು

ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ

ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
