AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ​ ಕೊಲೆ ಕೇಸ್​ NIA ಹೆಗಲಿಗೆ

ಮಂಗಳೂರಿನ ಬಜ್ಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ. ಬಿಜೆಪಿ ನಾಯಕರು ಮತ್ತು ಹಿಂದೂ ಕಾರ್ಯಕರ್ತರು NIA ತನಿಖೆಗೆ ಆಗ್ರಹಿಸಿದ್ದರು. ಪ್ರಕರಣದಲ್ಲಿ ಭಾರಿ ಸಂಚು ರೂಪಿಸಲಾಗಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪ ಮಾಡಿದ್ದರು. ಮೂರು ತಿಂಗಳ ಮುಂಚೆಯೇ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ತಿಳಿದುಬಂದಿತ್ತು. ಈಗ NIA ತನಿಖೆಯಿಂದ ಸತ್ಯಾಂಶ ಹೊರಬೀಳುವ ಸಾಧ್ಯತೆ ಇದೆ.

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ​ ಕೊಲೆ ಕೇಸ್​ NIA ಹೆಗಲಿಗೆ
ಎನ್​ಐಎ, ಸುಹಾಸ್​ ಶೆಟ್ಟಿ
ಹರೀಶ್ ಜಿ.ಆರ್​. ನವದೆಹಲಿ
| Updated By: ವಿವೇಕ ಬಿರಾದಾರ|

Updated on:Jun 08, 2025 | 6:42 PM

Share

ಬೆಂಗಳೂರು, ಜೂನ್​ 08: ಮಂಗಳೂರು (Mangaluru) ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದರು. ಈ ಬೆನ್ನಲ್ಲೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಗೃಹಸಚಿವಾಲಯ ರಾಷ್ಟ್ರೀಯ ತನಿಖಾ ದಳ (NIA) ಕ್ಕೆ ವಹಿಸಿ ಆದೇಶ ಹೊರಡಿಸಿದೆ.

ಪ್ರಕರಣದ ತನಿಖೆ NIAಗೆ ವಹಿಸುವಂತೆ ಮನವಿ ಮಾಡಿದ್ದ ಬಿಜೆಪಿ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ರಾಜ್ಯ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​ ಅವರಿಗೆ ಮನವಿ ಸಲ್ಲಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾ‌ನಸಭೆ ವಿಪಕ್ಷ ನಾಯಕ ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ರಾಜ್ಯಪಾಲರಿಗೆ ನಾಲ್ಕು ಪುಟಗಳ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರು. ಅಲ್ಲದೆ, ಪ್ರಕರಣದ ತನಿಖೆಯನ್ನು NIA ಗೆ ನೀಡುವಂತೆ ಸುಹಾಸ್ ಶೆಟ್ಡಿ ಪೋಷಕರು‌ ಸರ್ಕಾರಕ್ಕೆ ಒತ್ತಾಯಿಸಿದ್ದರು.

ಸುಹಾಸ್ ಶೆಟ್ಟಿ ಕೊಲೆ

ಕಳೆದ ಗುರುವಾರ (ಮೇ.01) ದಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್​ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಪೊಲೀಸರು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಈವರೆಗೆ 11 ಜನರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೊಲೆ ಕೇಸ್​: ಆರೋಪಿ ಅಬ್ದುಲ್ ರಜಾಕ್ ಬಂಧನ

ಇದನ್ನೂ ಓದಿ
Image
ಸುಹಾಸ್​ ಕೊಲೆಯ ಪ್ರತೀಕಾರಕ್ಕೆ ಹಿಂದೂ ಸಮಾಜ ಕಾದು ಕೂತಿದೆ: ಭಜರಂಗದಳ ಮುಖಂಡ
Image
ಸುಹಾಸ್​ ಶೆಟ್ಟಿ ಹತ್ಯೆ ಪ್ರಕರಣ NIAಗೆ ವಹಿಸುವಂತೆ ರಾಜ್ಯಪಾಲರಿಗೆ BJP ಮನವಿ
Image
ಸುಹಾಸ್​ ಕೊಲೆ: ಹಿಂದೂ ಕಾರ್ಯಕರ್ತರ ವಿರುದ್ಧ ಪೇದೆ ರಶೀದ್ ದೂರು
Image
ನೆಟ್ಟಾರು ಹತ್ಯೆ ಬಳಿಕ ಮಂಗಳೂರಿನಲ್ಲಿ ಮತ್ತೋರ್ವ ಹಿಂದೂ ಕಾರ್ಯಕರ್ತನ ಕೊಲೆ

3 ತಿಂಗಳ ಹಿಂದೆಯೇ ಸುಹಾಸ್ ಕೊಲೆಗೆ ಸಿದ್ಧವಾಗಿತ್ತು ಸ್ಕೆಚ್

ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದನು. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದನು. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ಪೊಲೀಸ್​ ತನಿಖೆ ವೇಳೆ ತಿಳಿದುಬಂದಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Sun, 8 June 25

ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ, ಇತ್ತ ಧಿಕಾರಿ ರಮ್ಮಿ ಆಟದಲ್ಲಿ ಮಗ್ನ
ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ, ಇತ್ತ ಧಿಕಾರಿ ರಮ್ಮಿ ಆಟದಲ್ಲಿ ಮಗ್ನ