ಬೆಳಗಾವಿ ಜಿಲ್ಲೆಯ ಹಳ್ಳಿಯಿಂದ ಹಳ್ಳಿಗೆ ಹೆಲಿಕಾಪ್ಟರ್ ನಲ್ಲಿ ಹಾರುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಸತೀಶ್ ಜಾರಕಿಹೊಳಿ
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಅವರು ಪಕ್ಷ ಸಂಘಟನೆಯಲ್ಲಿ ಜೋರಾಗಿ ತೊಡಗಿದ್ದು ಓಡಾಟಕ್ಕೆ ಹೆಲಿಕಾಪ್ಟರ್ ಬಳಸುತ್ತಿದ್ದಾರೆ.
ಬೆಳಗಾವಿ: ರಾಜಕಾರಣಿಗಳು ಕಾರು ಜೀಪುಗಳಲ್ಲಿ ಓಡಾಡುವ ಕಾಲ ಮುಗಿದು ಹೋಗಿದೆ ಮಾರಾಯ್ರೇ. ಮೊದಲಾದರೆ ರಾಷ್ಟ್ರಮಟ್ಟದ ರಾಜಕಾರಣಿಗಳು (National leaders) ಅದೂ ಅವಸರದ ನಿಮಿತ್ತ ಹೆಲಿಕಾಪ್ಟರ್ ಗಳಲ್ಲಿ (Helicopter) ಓಡಾಡುತ್ತಿದ್ದರು. ಆದರೆ ಈಗ ರಾಜ್ಯಮಟ್ಟದ ನಾಯಕರು ಸಹ ಓಡಾಟಕ್ಕೆ ಚಾಪರ್ ಗಳನ್ನು ಕಾರುಗಳಂತೆ ಬಳಸುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಪಕ್ಷ ಸಂಘಟನೆಯಲ್ಲಿ ಜೋರಾಗಿ ತೊಡಗಿದ್ದು ಓಡಾಟಕ್ಕೆ ವಿಡಿಯೋದಲ್ಲಿ ಕಾಣುತ್ತಿರುವ ಹಾಗೆ ಹೆಲಿಕಾಪ್ಟರ್ ಬಳಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಹೋಗಲು ಅವರು ಚಾಪರ್ ಅನ್ನೇ ಉಪಯೋಗಿಸುತ್ತಿದ್ದಾರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ