Assembly Polls | ಜೆಡಿಎಸ್ ಟಿಕೆಟ್ಗೋಸ್ಕರ ಯಾರೇ ಆಕಾಂಕ್ಷಿಗಳಾಗಿದ್ದರೂ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಣಯವೇ ಅಂತಿಮ: ಅನಿತಾ ಕುಮಾರಸ್ವಾಮಿ
ರಾಮನಗರ ಕ್ಷೇತ್ರದ ವಿಷಯವೂ ಅಷ್ಟೇ, ವರಿಷ್ಠರು ಯಾರು ಸ್ಪರ್ಧಿಸಬೇಕೆಂದು ಸೂಚಿಸುತ್ತಾರೋ ಅವರೇ ಸ್ಪರ್ಧಿಸುತ್ತಾರೆ ಅಂತ ಅನಿತಾ ಕುಮಾರಸ್ವಾಮಿ ಹೇಳಿದರು.
ರಾಮನಗರ: ಹಾಸನ ಮತಕ್ಷೇತ್ರದಲ್ಲಿ (Hassan Constituency) ಜೆಡಿಎಸ್ ಪಕ್ಷದ ಟಿಕೆಟ್ ಯಾರಿಗೆ ಸಿಗಲಿದೆ ಅಂತ ಇನ್ನೂ ನಿರ್ಧಾರವಾಗಿಲ್ಲ. ರಾಮನಗರದಲ್ಲಿ ಇಂದು ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಭಾಗದ ಶಾಸಕಿ ಅನಿತಾ ಕುಮಾರಸ್ವಾಮಿ (Anita Kumaraswamy) ಅವರು ಭವಾನಿ ರೇವಣ್ಣ (Bhavani Revanna) ಅವರಿಗೆ ಟಿಕೆಟ್ ಸಿಗುತ್ತೋ ಇಲ್ಲವೋ ಅಂತ ಬಹಳ ಡಿಪ್ಲೊಮ್ಯಾಟಿಕ್ ಆಗಿ ಮಾತಾಡಿದರು. ಟಿಕೆಟ್ ಗೋಸ್ಕರ ಯಾರೇ ಆಕಾಂಕ್ಷಿಗಳಾಗಿದ್ದರೂ ಪಕ್ಷದ ವರಿಷ್ಠರಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿಯವರು ತೆಗೆದುಕೊಳ್ಳುವ ನಿರ್ಣಯವೇ ಅಂತಿಮ ಎಂದು ಅವರು ಹೇಳಿದರು. ರಾಮನಗರ ಕ್ಷೇತ್ರದ ವಿಷಯವೂ ಅಷ್ಟೇ, ವರಿಷ್ಠರು ಯಾರು ಸ್ಪರ್ಧಿಸಬೇಕೆಂದು ಸೂಚಿಸುತ್ತಾರೋ ಅವರೇ ಸ್ಪರ್ಧಿಸುತ್ತಾರೆ ಅಂತ ಅನಿತಾ ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos