Sanya Iyer: ‘ಅಸಭ್ಯವಾಗಿ ಮುಟ್ಟಿದಾಗ ನಾವು ಸುಮ್ಮನೆ ಇದ್ದಾಗಲೇ ಇಂಥ ಕೆಟ್ಟ ಗಂಡ್ಮಕ್ಕಳು ಹುಟ್ಟಿಕೊಳ್ಳೋದು’: ಸಾನ್ಯಾ

Sanya Iyer: ‘ಅಸಭ್ಯವಾಗಿ ಮುಟ್ಟಿದಾಗ ನಾವು ಸುಮ್ಮನೆ ಇದ್ದಾಗಲೇ ಇಂಥ ಕೆಟ್ಟ ಗಂಡ್ಮಕ್ಕಳು ಹುಟ್ಟಿಕೊಳ್ಳೋದು’: ಸಾನ್ಯಾ

ಮದನ್​ ಕುಮಾರ್​
|

Updated on:Jan 31, 2023 | 7:36 PM

Sanya Iyer Press Meet: ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಸಾನ್ಯಾ ಐಯ್ಯರ್​ ಅವರು ಗರಂ ಆಗಿದ್ದಾರೆ. ಹೆಣ್ಣು ಮಕ್ಕಳಿಗೆ ಆಗುತ್ತಿರುವ ಕೆಟ್ಟ ಅನುಭವಗಳ ವಿರುದ್ಧ ಅವರು ಕಿಡಿಕಾರಿದ್ದಾರೆ.

ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸಾನ್ಯಾ ಐಯ್ಯರ್​ (Sanya Iyer) ಅವರು ಕಂಬಳ ವೀಕ್ಷಿಸಲು ತೆರಳಿದ್ದಾಗ ಅಹಿತಕರ ಘಟನೆ ನಡೆದಿದೆ. ಆ ಕುರಿತು ಸ್ಪಷ್ಟನೆ ನೀಡಲು ಸಾನ್ಯಾ ಐಯ್ಯರ್​ ಸುದ್ದಿಗೋಷ್ಠಿ ಕರೆದಿದ್ದಾರೆ. ಪುತ್ತೂರಿನಲ್ಲಿ (Puttur) ಅವರ ಸ್ನೇಹಿತೆಯ ಜೊತೆ ಅಪರಿಚಿತ ಯುವಕ ಕೆಟ್ಟದಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡುವಾಗ ಸಾನ್ಯಾ ಐಯ್ಯರ್​ ಗರಂ ಆಗಿದ್ದಾರೆ. ‘ನಾವು ರಸ್ತೆಯಲ್ಲಿ ನಡೆದಾಡುವಾಗ ಯಾರೋ ಬಂದು ಎದೆ ಮುಟ್ಟುತ್ತಾರೆ. ಈ ರೀತಿ ಆದಾಗ ನಾವು ಸುಮ್ಮನೆ ಇದ್ದಾಗಲೇ ಇಂಥ ಕೆಟ್ಟ ಗಂಡ್ಮಕ್ಕಳು ಹುಟ್ಟಿಕೊಳ್ಳೋದು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Jan 31, 2023 07:36 PM