Video: ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ

Updated on: Jun 16, 2025 | 11:21 AM

ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸೌದಿ ಏರ್​​ಲೈನ್ಸ್​​ನ ಚಕ್ರದಲ್ಲಿ ಬೆಂಕಿ  ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಎಲ್ಲಾ ಪ್ರಯಾಣಿಕರನ್ನು ಸಕಾಲದಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ಅಗ್ನಿಶಾಮಕ ದಳದ ತಂಡವು ಬೆಂಕಿಯನ್ನು ನಿಯಂತ್ರಿಸಿತು. 250 ಹಜ್ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಸೌದಿ ಏರ್‌ಲೈನ್ಸ್ ವಿಮಾನವು ಭಾನುವಾರ ಬೆಳಗ್ಗೆ ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಲ್ಯಾಂಡಿಂಗ್ ಗೇರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಲಕ್ನೋ, ಜೂನ್ 16: ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸೌದಿ ಏರ್​​ಲೈನ್ಸ್​​ನ ಚಕ್ರದಲ್ಲಿ ಬೆಂಕಿ  ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಎಲ್ಲಾ ಪ್ರಯಾಣಿಕರನ್ನು ಸಕಾಲದಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ಅಗ್ನಿಶಾಮಕ ದಳದ ತಂಡವು ಬೆಂಕಿಯನ್ನು ನಿಯಂತ್ರಿಸಿತು. 250 ಹಜ್ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಸೌದಿ ಏರ್‌ಲೈನ್ಸ್ ವಿಮಾನವು ಭಾನುವಾರ ಬೆಳಗ್ಗೆ ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಲ್ಯಾಂಡಿಂಗ್ ಗೇರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಚಕ್ರದಿಂದ ಕಿಡಿಗಳು ಮತ್ತು ಹೊಗೆ ಹೊರಬರುತ್ತಿರುವುದನ್ನು ನೋಡಿದ ಪೈಲಟ್ ವಿಮಾನವನ್ನು ನಿಲ್ಲಿಸಿ ವಾಯು ಸಂಚಾರ ನಿಯಂತ್ರಣಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ತಂಡ ತಕ್ಷಣ ಪ್ರತಿಕ್ರಿಯಿಸಿ ಫೋಮ್ ಮತ್ತು ನೀರನ್ನು ಬಳಸಿ 20 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು. ಕಳೆದ ಗುರುವಾರವಷ್ಟೇ ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ  ಪತನ ಸಂಭವಿಸಿ 270 ಮಂದಿ ಸಾವನ್ನಪ್ಪಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ