ಸೌಜನ್ಯ ಕೇಸ್ ತನಿಖೆಗೆ ಮಂಗಳೂರಲ್ಲಿ ಎಸ್ಐಟಿ ಕಚೇರಿ ಓಪನ್: ಅಧಿಕಾರಿಗಳಿಂದ ಮೊದಲ ಸಭೆ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ರಚಿಸಲಾದ ವಿಶೇಷ ತನಿಖಾ ದಳ ಅಧಿಕೃತವಾಗಿ ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾರಂಭ ಮಾಡಿದೆ. 2012ರ ಪ್ರಕರಣದ ಮರುತನಿಖೆ ಇಂದಿನಿಂದ ಶುರುವಾಗಿದ್ದು, ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕಿದೆ. ಐಪಿಎಸ್ ಅಧಿಕಾರಿ ನಿಷಾ ಜೇಮ್ಸ್ ನೇತೃತ್ವದ 16 ಸದಸ್ಯರ ತಂಡ ತನಿಖೆ ನಡೆಸಲಿದೆ.
ಮಂಗಳೂರು, ಅಕ್ಟೋಬರ್ 01: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ದಳ ಈಗಾಗಲೇ ರಚಿಸಲಾಗಿದ್ದು, ಮಂಗಳೂರಿನ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ಐಟಿ ತನಿಖಾ ಕಚೇರಿ ಸಿದ್ಧವಾಗಿದೆ. ಆ ಮೂಲಕ 2012ರ ಅಕ್ಟೋಬರ್ 9ರಂದು ನಡೆದಿದ್ದ ಪ್ರಕರಣದ ಮರುತನಿಖೆ ಇಂದಿನಿಂದ ಶುರುವಾಗಿದೆ. ಈಗಾಗಲೇ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿದ್ದು, ಎಸ್ಐಟಿ ಮುಖ್ಯಸ್ಥ ಡಿಐಜಿಪಿ ಎನ್.ಶಶಿಕುಮಾರ್ ನೇತೃತ್ವದಲ್ಲಿ ಇಂದು ಮೊದಲ ಸಭೆ ಕೂಡ ನಡೆದಿದೆ. ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ್, ಲೋಕೇಶ್ ಬಸಪ್ಪ ಜಗಲಾಸರ್ ಸೇರಿದಂತೆ ಮಂಗಳೂರು, ರಾಜ್ಯದ ಬೇರೆಡೆಯ 16 ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಭಾಗಿ ಆಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
