Yearly Horoscope 2026 : 2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ

Updated on: Dec 25, 2025 | 2:07 PM

ವೃಶ್ಚಿಕ ರಾಶಿಯವರಿಗೆ 2026ರ ವಾರ್ಷಿಕ ಭವಿಷ್ಯ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಗುರು ಗ್ರಹದ ಸಂಚಾರದಿಂದ ಆರ್ಥಿಕ ಪ್ರಗತಿ, ಆದಾಯದಲ್ಲಿ ಏರಿಕೆ ಇರಲಿದೆ. ಮಕ್ಕಳ ಚಿಂತೆ, ಆಂತರಿಕ ಅಸಂತೃಪ್ತಿ ಹಾಗೂ ಕುಟುಂಬ ಕಲಹಗಳ ಸಾಧ್ಯತೆಯೂ ಇದೆ. ಹನುಮಂತನ ಸ್ತೋತ್ರ ಪಠಣೆ, ಕೆಂಪು-ಕೇಸರಿ ಬಣ್ಣಗಳ ಬಳಕೆ ಶುಭಕರ.

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವೃಶ್ಚಿಕ ರಾಶಿಯವರಿಗೆ 2026ರ ವಾರ್ಷಿಕ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವರ್ಷ ಗುರು ಗ್ರಹವು ಎಂಟನೇ ಮನೆಯಿಂದ ಒಂಬತ್ತನೇ ಮನೆಗೆ ಸಂಚಾರ ಮಾಡುವುದರಿಂದ ಅದೃಷ್ಟ ಮತ್ತು ದೈವಬಲ ಹೆಚ್ಚಾಗಲಿದೆ. ಶನಿ ಗ್ರಹವು ವರ್ಷವಿಡೀ ಪಂಚಮದಲ್ಲೇ ಇರಲಿದ್ದು, ರಾಹು ಚತುರ್ಥದಿಂದ ತೃತೀಯಕ್ಕೆ ಮತ್ತು ಕೇತು ದಶಮದಿಂದ ನವಮಕ್ಕೆ ಸಂಚಾರ ಮಾಡಲಿದೆ.

ಆರ್ಥಿಕವಾಗಿ ಈ ವರ್ಷ ಪ್ರಗತಿ ಕಾಣುವ ಸಾಧ್ಯತೆ ಇದೆ. ಆದಾಯವು ಹೆಚ್ಚಾಗಿ, ಕೆಲಸ ಕಾರ್ಯಗಳಲ್ಲಿ ಶುಭ ಫಲಗಳು ದೊರೆಯುತ್ತವೆ. ಮೊದಲಾರ್ಧದಲ್ಲಿ ತೀವ್ರ ಪ್ರಯತ್ನಗಳು ಬೇಕಾದರೂ, ದ್ವಿತೀಯಾರ್ಧದಲ್ಲಿ ಗುರುಬಲದ ಅನುಗ್ರಹದಿಂದ ಹೆಚ್ಚಿನ ಯಶಸ್ಸು ಸಿಗಲಿದೆ. ಮಕ್ಕಳ ಚಿಂತೆ, ಅವರ ಶಿಕ್ಷಣ ಮತ್ತು ವಿವಾಹದ ವಿಚಾರದಲ್ಲಿ ಒಂದಷ್ಟು ಸವಾಲುಗಳು ಎದುರಾಗಬಹುದು. ತಾಯಿಯ ಆರೋಗ್ಯ ಮತ್ತು ಮನೆ ಕಟ್ಟುವ ವಿಚಾರದಲ್ಲಿ ವಿಳಂಬಗಳು ಕಂಡುಬಂದರೂ ಕಾರ್ಯ ಪೂರ್ಣಗೊಳ್ಳಲಿದೆ. ಆಂತರಿಕ ಅಸಂತೃಪ್ತಿ ಮತ್ತು ಆಪ್ತರಿಂದ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು.

ವಾಹನ ಚಾಲನೆ ಮತ್ತು ದೀರ್ಘ ಪ್ರಯಾಣಗಳಲ್ಲಿ ಎಚ್ಚರಿಕೆ ಅಗತ್ಯ. ಅನಾರೋಗ್ಯದ ಸಣ್ಣಪುಟ್ಟ ಸಮಸ್ಯೆಗಳು ಕಾಡಬಹುದು. ಹನುಮನ ಸ್ತೋತ್ರ ಪಠಣೆ, ಕೆಂಪು ಮತ್ತು ಕೇಸರಿ ಬಣ್ಣಗಳ ಬಳಕೆ ಹಾಗೂ 9 ಮತ್ತು 6 ಅದೃಷ್ಟ ಸಂಖ್ಯೆಗಳಾಗಿವೆ ಎಂದು ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ