AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yearly Horoscope 2026: 2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ

Yearly Horoscope 2026: 2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ

ಅಕ್ಷತಾ ವರ್ಕಾಡಿ
|

Updated on: Dec 24, 2025 | 1:33 PM

Share

ಡಾ. ಬಸವರಾಜ ಗುರೂಜಿಯವರ ಪ್ರಕಾರ, 2026ರ ತುಲಾ ರಾಶಿಯವರಿಗೆ ಆರ್ಥಿಕವಾಗಿ ಸಬಲತೆ ಇರಲಿದ್ದು, ಮನೆ ಕಟ್ಟುವ ಯೋಗವಿದೆ. ಆದರೆ ಹೂಡಿಕೆಗಳಲ್ಲಿ ಜಾಗ್ರತೆ ಅಗತ್ಯ. ಗುರು, ಶನಿ ಗ್ರಹಗಳ ಸಂಚಾರದಿಂದ ಕೆಲ ಸವಾಲುಗಳ ಜೊತೆಗೆ ಉದ್ಯೋಗ, ವಿದೇಶ ಪ್ರಯಾಣ, ಶಿಕ್ಷಣದಲ್ಲಿ ಶುಭ ಫಲಗಳಿವೆ. ದುರ್ಗಾ ಮತ್ತು ಮಹಾಲಕ್ಷ್ಮಿ ಆರಾಧನೆ, ಗೋ ಸೇವೆ ಪರಿಹಾರೋಪಾಯಗಳಾಗಿವೆ.

2026ರ ತುಲಾ ರಾಶಿಯ ವರ್ಷ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ವಿಶ್ಲೇಷಿಸಿದ್ದಾರೆ. ಈ ರಾಶಿಯಲ್ಲಿ ಚಿತ್ತಾ ನಕ್ಷತ್ರದ 3 ಮತ್ತು 4ನೇ ಪಾದ, ಸ್ವಾತಿ ನಕ್ಷತ್ರದ 4ನೇ ಪಾದ, ವಿಶಾಖ ನಕ್ಷತ್ರದ 1, 2, ಮತ್ತು 3ನೇ ಪಾದಗಳು ಸೇರಿವೆ. ಜೂನ್ 2ರ ವರೆಗೆ ಗುರುಬಲ ಇದ್ದು, ನಂತರ ಗುರು ಭಾಗ್ಯ ಸ್ಥಾನದಿಂದ ಕರ್ಮ ಸ್ಥಾನಕ್ಕೆ (9ರಿಂದ 10ನೇ ಮನೆಗೆ) ಸಂಚಾರ ಮಾಡಲಿದೆ. ಶನಿ ಗ್ರಹ 6ನೇ ಮನೆಯಲ್ಲಿ, ರಾಹು 5ರಿಂದ 4ಕ್ಕೆ, ಕೇತು 11ರಿಂದ 10ಕ್ಕೆ ಸಂಚರಿಸಲಿವೆ.

ವೃತ್ತಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಶುಭ ಫಲಗಳು ಹೆಚ್ಚಾಗಲಿದ್ದು, ಕಲಾವಿದರು, ಸಾಹಿತಿಗಳು, ಪತ್ರಕರ್ತರು, ಸಿನಿಮಾ ನಟರು, ಶಿಕ್ಷಕರು, ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಪ್ರಗತಿ ನಿರೀಕ್ಷಿಸಲಾಗಿದೆ. ಮನೆ ಕಟ್ಟುವ, ಸೈಟ್ ವಿವಾದ ಬಗೆಹರಿಯುವ ಯೋಗವಿದೆ. ಉನ್ನತ ಶಿಕ್ಷಣ, ದೂರದ ಪ್ರಯಾಣ ಹಾಗೂ ಉತ್ತಮ ಜನಸಂಪರ್ಕ ಸಾಧ್ಯ. ಮಹಿಳೆಯರಿಗೆ ಹಣದ ಹರಿವು ಹೆಚ್ಚಾಗಿ, ತಂದೆ-ತಾಯಿಗಳ ಬೆಂಬಲ ಮತ್ತು ಪತಿ/ಸ್ವಂತ ಉದ್ಯೋಗದಲ್ಲಿ ಬಡ್ತಿ ಯೋಗವಿದೆ.

ಹಣಕಾಸಿನ ಹೂಡಿಕೆ ವಿಚಾರದಲ್ಲಿ ಜಾಗ್ರತೆ ಅಗತ್ಯ. ದುಶ್ಚಟಗಳಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆತುರದ ನಿರ್ಧಾರಗಳು, ಕೋಪತಾಪಗಳಿಂದ ದೂರವಿರಿ. ವಾಹನ ಚಾಲನೆಯಲ್ಲಿ ಎರಡನೇ ಅರ್ಧಭಾಗದಲ್ಲಿ ಎಚ್ಚರಿಕೆ ವಹಿಸಬೇಕು. ದುಂದುವೆಚ್ಚ, ಶೇರ್ ಮಾರ್ಕೆಟ್‌ನಲ್ಲಿನ ಅತಿಯಾದ ಹೂಡಿಕೆಗಳಿಂದ ದೂರವಿರಲು ಸೂಚಿಸಲಾಗಿದೆ. ಮಕ್ಕಳ ಕಡೆಗೆ ಹೆಚ್ಚು ಗಮನ ನೀಡಬೇಕು. ದೇವಿ ಆರಾಧನೆ, ಗೋ ಸೇವೆ ಹಾಗೂ ಅನಾಥರಿಗೆ ಸಹಾಯ ಮಾಡುವುದು ಉತ್ತಮ ಪರಿಹಾರೋಪಾಯಗಳಾಗಿವೆ. ಗುಲಾಬಿ, ಕಪ್ಪು ಬಣ್ಣಗಳು, 6 ಮತ್ತು 2 ಅದೃಷ್ಟ ಸಂಖ್ಯೆಗಳು, ಪೂರ್ವ ಮತ್ತು ದಕ್ಷಿಣ ದಿಕ್ಕು ಪ್ರಯಾಣಕ್ಕೆ ಶುಭ. ಲಕ್ಷ್ಮೀನಾರಸಿಂಹ ಮಂತ್ರ ಕೇಳುವುದು ಮತ್ತು ದರ್ಶನ ಮಾಡುವುದು ಶುಭ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ