AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yearly Horoscope 2026: 2026 ಕನ್ಯಾ ರಾಶಿಯವರಿಗೆ ಬಹುತೇಕ ಸುವರ್ಣಾವಧಿ, ಆದ್ರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ

Yearly Horoscope 2026: 2026 ಕನ್ಯಾ ರಾಶಿಯವರಿಗೆ ಬಹುತೇಕ ಸುವರ್ಣಾವಧಿ, ಆದ್ರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ

ಅಕ್ಷತಾ ವರ್ಕಾಡಿ
|

Updated on: Dec 23, 2025 | 12:25 PM

Share

2026 ಕನ್ಯಾ ರಾಶಿಯವರಿಗೆ ಸುವರ್ಣಾವಧಿಯಾಗಿದ್ದು, ಗುರು ಗ್ರಹದ ಅನುಗ್ರಹದಿಂದ ಲಾಭ, ಯಶಸ್ಸು, ಬಲ ಹೆಚ್ಚಲಿದೆ. ವೃತ್ತಿ, ಆರ್ಥಿಕತೆ, ವೈವಾಹಿಕ ಜೀವನದಲ್ಲಿ ಶುಭ ಫಲಗಳಿರುತ್ತವೆ. ಆದಾಯ ಹೆಚ್ಚು, ಖರ್ಚು ಕಡಿಮೆ ಇರಲಿದ್ದು, ಗೌರವ ಗಳಿಸುವಿರಿ. ಕಂಟಕ ಶನಿಯ ಕಾರಣದಿಂದ ತಾಳ್ಮೆ, ಸಜ್ಜನರ ಸಹವಾಸ ಅತಿ ಮುಖ್ಯ. ಆರೋಗ್ಯ ಮತ್ತು ಕೌಟುಂಬಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ದತ್ತಾತ್ರೇಯ ಸ್ತೋತ್ರ ಪಠಣ ಶುಭಕಾರಿ.

ಡಾ. ಬಸವರಾಜ ಗುರೂಜಿ ಅವರು 2026ರ ಕನ್ಯಾ ರಾಶಿಯ ವರ್ಷ ಭವಿಷ್ಯದ ಕುರಿತು ಮಾಹಿತಿ ನೀಡಿದ್ದಾರೆ. ಈ ವರ್ಷ ಕನ್ಯಾ ರಾಶಿಯವರಿಗೆ ಬಹುತೇಕ ಸುವರ್ಣಾವಧಿಯಾಗಿದ್ದು, ವಿಶೇಷವಾಗಿ ಗುರು ಗ್ರಹದ ಲಾಭಸ್ಥಾನದ ಸಂಚಾರದಿಂದ ಸರ್ವತೋಮುಖ ಯಶಸ್ಸು, ಬಲ ಮತ್ತು ತೇಜಸ್ಸು ಹೆಚ್ಚಲಿದೆ. ಆದಾಯ 8, ವ್ಯಯ 7 ಇರುವುದರಿಂದ ಆರ್ಥಿಕವಾಗಿ ಸದೃಢ ವರ್ಷ ಇದಾಗಿದೆ. ಗೌರವಗಳು ಹೆಚ್ಚಲಿದ್ದು, ಅವಮಾನಗಳು ಕಡಿಮೆಯಾಗಲಿವೆ.

ವೃತ್ತಿ ಜೀವನದಲ್ಲಿ ಜೂನ್ ತನಕ ವೃತ್ತಿ ಬದಲಾವಣೆ, ಜವಾಬ್ದಾರಿ ಹೆಚ್ಚಳ, ಬಡ್ತಿ ಮತ್ತು ಸ್ಥಾನಪಲ್ಲಟದ ಸಾಧ್ಯತೆ ಇದೆ. ಪ್ರಾಮಾಣಿಕತೆ, ನಿಷ್ಠೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವುದು ಒಳಿತು. ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಯಲಿದೆ. ಆರ್ಥಿಕವಾಗಿ ಉನ್ನತಿ, ದೊಡ್ಡ ಯೋಜನೆಗಳ ಯಶಸ್ಸು, ವಿವಾಹ ಯೋಗ, ವಾಹನ ಮತ್ತು ಕಟ್ಟಡ ಯೋಗವಿದೆ. ರಿಯಲ್ ಎಸ್ಟೇಟ್, ಆಸ್ಪತ್ರೆ ನಿರ್ವಹಿಸುವವರಿಗೆ ಶುಭ ಫಲಗಳು.

ಆರೋಗ್ಯದ ವಿಚಾರದಲ್ಲಿ ರಾಹು ಪ್ರಭಾವದಿಂದ ನಿರ್ಲಕ್ಷ್ಯ ಬೇಡ. ಆಕಸ್ಮಿಕ ಘಟನೆಗಳ ಸಾಧ್ಯತೆಯಿದೆ. ಕಂಟಕ ಶನಿಯ ಪ್ರಭಾವದಿಂದ ತಾಳ್ಮೆ ಮತ್ತು ಸಜ್ಜನರ ಸಹವಾಸ ಮುಖ್ಯ. ಪಾಲುದಾರಿಕೆ ಹಾಗೂ ವಿವಾಹಾನಂತರ ಸಣ್ಣ ಸಂಕಟಗಳು ಎದುರಾಗಬಹುದು. ಆದರೂ, ಶ್ರದ್ಧೆಯಿಂದ ಕರ್ಮ ಮಾಡಿ, ದೇವತಾ ಪ್ರಾರ್ಥನೆಯಲ್ಲಿ ತೊಡಗುವುದು ಶುಭ ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ