ಕಡಲ ಕೊರೆತಕ್ಕೆ ಧರೆಗುರುಳಿದ ತೆಂಗಿನ ಮರಗಳು, ತಲೆ ಕೆಡಿಸಿಕೊಳ್ಳದ ಸರ್ಕಾರ
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದ ಪರಿಣಾಮ ಕಡಲಲ್ಲಿ ಗಜ ಗಾತ್ರದ ಅಲೆಗಳು ಏಳುತ್ತಿವೆ. ಪರಿಣಾಮವಾಗಿ ಕಡಲ ಕೊರೆತ ಉಂಟಾಗಿದ್ದು, ಹಲವು ತೆಂಗಿನ ಮರಗಳು ಧರೆಗುರುಳಿವೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗ ತೊಡಗಿದೆ. ಪರಿಣಾಮವಾಗಿ ಕಡಲ ಕೊರೆತ ಉಂಟಾಗಿದೆ. ಗಜ ಗಾತ್ರದ ಅಲೆಗಳ ಅಬ್ಬರಕ್ಕೆ ಕಡಲ ಕೊರೆತ ಉಂಟಾಗಿ ಬುಡ ಸಮೇತ 20ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ. ಕಾರವಾರ ತಾಲೂಕಿನ ತರಂಗಮೇಟು ಕಡಲತೀರದಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಕಡಲ ತೀರದಲ್ಲಿ ನೆಲೆಸಿರುವ ಜನರಲ್ಲಿ ಆತಂಕ ಉಂಟಾಗಿದೆ. ಈ ಭಾಗದಲ್ಲಿ ಪ್ರತಿ ವರ್ಷ 50 ರಿಂದ 100 ಕಡಲ ಕೊರೆತಗಳು ಸಂಭವಿಸುತ್ತಿದ್ದರೂ ಸರ್ಕಾರ ತೆಲೆ ಕೆಡಿಸಿಕೊಳ್ಳುತ್ತಿಲ್ಲ. ಕಡಲ ಕೊರೆತದಿಂದಾಗಿ ಮೀನುಗಾರರಲ್ಲಿ ಆತಂಕ ಹೆಚ್ಚಿಸಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ: ಸ್ಥಗಿತಗೊಂಡ ಕಿಕ್ರೆ-ಶೃಂಗೇರಿ ಸಂಪರ್ಕ
Published on: Jul 11, 2022 09:47 AM