ಸಿದ್ದಣ್ಣ ಅಂದ್ರೆ ಈ ವಿಶೇಷ ಚೇತನ ಯುವಕನಿಗೂ ಎಷ್ಟು ಪ್ರೀತಿ ನೋಡಿ; ವಿಡಿಯೋ ವೈರಲ್
ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದಿಂದ ಗೆದ್ದುಬೀಗಿದೆ. ಅದರಂತೆ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದು, ಇಂದು(ಮೇ.19) ಸಿದ್ದಣ್ಣ ಅವರ ಮನೆ ಮುಂದೆ ಒಬ್ಬ ವಿಶೇಷ ಚೇತನ ಯುವಕ ಸಿದ್ದರಾಮಯ್ಯ ಮನೆ ಬಳಿ ಬಂದು, ಗೇಟ್ ಮುಂದೆನೇ ಕಾದು ಕೂತಿದ್ದ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Elections 2023 Result) ಬಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದಿಂದ ಗೆದ್ದುಬೀಗಿದೆ. ಅದರಂತೆ ಫಲಿತಾಂಶ ಬಂದು 6 ದಿನವಾದರೂ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿತ್ತು. ಇದೀಗ ಸಿದ್ದರಾಮಯ್ಯ (Siddaramaiah) ಅವರನ್ನ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಈ ಹಿನ್ನಲೆ ನಾಳೆ (ಮೇ.20) ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದು, ಇಂದು(ಮೇ.19) ಸಿದ್ದಣ್ಣ ಅವರ ಮನೆ ಮುಂದೆ ಒಬ್ಬ ವಿಶೇಷ ಅತಿಥಿ ಕಾದುಕುಳಿತ್ತಿದ್ದರು. ಹೌದು ಸಿದ್ದಣ್ಣ ಅಂದ್ರೆ, ಈ ವಿಶೇಷ ಚೇತನ ಯುವಕನಿಗೂ ಎಷ್ಟು ಆಸೆ ನೋಡಿ. ಬೆಳ್ಬೆಳಗ್ಗೆನೆ ಸಿದ್ದರಾಮಯ್ಯ ಮನೆ ಬಳಿ ಬಂದು, ಗೇಟ್ ಮುಂದೆನೇ ಕಾದು ಕೂತಿದ್ದ ವಿಶೇಷ ಚೇತನ ಯುವಕನನ್ನ ನೋಡಿ ಪೊಲೀಸರು ಕೊನೆಗೂ ಸಿದ್ರಾಮಯ್ಯ ನೋಡಲು ಮನೆಗೆ ಬಿಟ್ಟರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 19, 2023 03:40 PM