Tech Tips: ಯೂಟ್ಯೂಬ್​ನಲ್ಲಿ​ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

Youtube Tricks: ಯೂಟ್ಯೂಬ್‌ನಲ್ಲಿ ಏನಾದರು ಅಗತ್ಯವಾದ ಅಥವಾ ಕುತೂಹಲಕಾರಿ ವಿಡಿಯೋವನ್ನು ನೋಡುತ್ತಿರುವಾಗ ಅದರ ಮಧ್ಯೆ 15, 30 ಸೆಕಂಡ್​ಗಳ ಜಾಹೀರಾತು (Advertisement) ಬಂದರೆ ಮೂಡ್‌ ಆಫ್‌ ಆಗಿ ಬಿಡುತ್ತದೆ. ಇಷ್ಟೇಲ್ಲಾ ಇರುವ ಯೂಟ್ಯೂಬ್‌ನ ಆದಾಯದ ಪ್ರಮುಖ ಮೂಲ ಜಾಹೀರಾತುಗಳೇ.

Tech Tips: ಯೂಟ್ಯೂಬ್​ನಲ್ಲಿ​ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Youtube
Follow us
Vinay Bhat
|

Updated on: May 19, 2023 | 3:25 PM

ಈಗ ಯೂಟ್ಯೂಬ್‌ನಲ್ಲಿ (YouTube) ವಿಡಿಯೋಗಳನ್ನು ನೋಡುವುದು ಎಂದರೆ ಅದು ಒಂದು ರೀತಿ ಟಿವಿಯನ್ನು ನೋಡಿದ ಹಾಗೆ. ಯಾಕೆಂದರೆ ಅಷ್ಟೊಂದು ಜಾಹೀರಾತುಗಳು ಒಂದರ ಹಿಂದೆ ಒಂದರಂತೆ ಬರುತ್ತಾ ಇರುತ್ತವೆ. ವಿಡಿಯೋವನ್ನು ಸತತವಾಗಿ ನೋಡಲು ಸಾಧ್ಯವೇ ಇಲ್ಲ. ಏನಾದರು ಅಗತ್ಯವಾದ ಅಥವಾ ಕುತೂಹಲಕಾರಿ ವಿಡಿಯೋವನ್ನು ನೋಡುತ್ತಿರುವಾಗ ಅದರ ಮಧ್ಯೆ 15, 30 ಸೆಕಂಡ್​ಗಳ ಜಾಹೀರಾತು (Advertisement) ಬಂದರೆ ಮೂಡ್‌ ಆಫ್‌ ಆಗಿ ಬಿಡುತ್ತದೆ. ಇಷ್ಟೇಲ್ಲಾ ಇರುವ ಯೂಟ್ಯೂಬ್‌ನ ಆದಾಯದ ಪ್ರಮುಖ ಮೂಲ ಜಾಹೀರಾತುಗಳೇ. ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವಾಗ ಮಧ್ಯ ಮಧ್ಯ ಬರುವ ಜಾಹೀರಾತುಗಳನ್ನು ಕಾಣಿಸದಂತೆ ಬ್ಲಾಕ್ ಮಾಡಬಹುದಾಗಿದೆ. ಹಾಗಾದ್ರೆ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹೀರಾತು ಬಂದೇ ಇಲ್ಲ ಎಂದರೆ ಹೇಗೆ..?. ಇದಕ್ಕೆ ಇಲ್ಲಿದೆ ನೋಡಿ ಟ್ರಿಕ್ (Tech Tips).

ಆ್ಯಡ್ ಬ್ಲಾಕರ್ ಉಪಯೋಗಿಸಿ:

ಬ್ರೌಸರ್‌ನಲ್ಲಿ ಯೂಟ್ಯೂಬ್‌ ವಿಡಿಯೋಗಳನ್ನು ವೀಕ್ಷಿಸುತ್ತೀರಿ ಎಂದಾದರೆ ಗುಣಮಟ್ಟದ ಜಾಹೀರಾತು ಬ್ಲಾಕರ್‌ಗಳನ್ನು ಉಪಯೋಗಿಸಿದರೆ ನಿಮಗೆ ಆ್ಯಡ್‌ಫ್ರೀ ಯೂಟ್ಯೂಬ್‌ ವೀಕ್ಷಣೆ ಸಿಗುತ್ತದೆ. ಆಡ್‌ಬ್ಲಾಕ್‌, ಸ್ಟಾಪ್‌ ಆಡ್‌ಗಳಂತಹ ಆಡ್‌ ಬ್ಲಾಕರ್‌ಗಳು ಬ್ರೌಸರ್‌ ಎಕ್ಸಟೆನ್ಷನ್‌ ಆಗಿ ದೊರೆಯುತ್ತವೆ. ಇನ್‌ಸ್ಟಾಲ್‌ ಮಾಡಿಕೊಂಡು ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ಆನಂದಿಸಬಹುದು. ಆ್ಯಡ್‌ಬ್ಲಾಕರ್‌ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ. ಆಡ್‌ಬ್ಲಾಕರ್‌ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್‌ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹ ಸರ್ಚ್‌ ಇಂಜಿನ್‌ಗಳಲ್ಲಿ ನೀವು ಜಾಹೀರಾತಯ ಮುಕ್ತ ವಿಡಿಯೋಗಳನ್ನು ನೋಡಬಹುದು.

ಇದನ್ನೂ ಓದಿ
Image
Redmi A2: ಕೇವಲ 5,999 ರೂ.: ಒಂದೇ ದಿನ ಎರಡು ಹೊಸ ಫೋನ್ ಬಿಡುಗಡೆ ಮಾಡಿದ ರೆಡ್ಮಿ
Image
Tech Tips: ಇನ್​ಸ್ಟಾಗ್ರಾಮ್​ ಸ್ಟೇಟಸ್​ನ ಈ ಟ್ರಿಕ್ ನಿಮಗೆ ಗೊತ್ತೇ?: ಏನದು ನೋಡಿ
Image
Realme Narzo N53: ಬಜೆಟ್ ಪ್ರಿಯರಿಗಾಗಿ ಕೇವಲ 8,999 ರೂ. ಗೆ ಆಕರ್ಷಕ ಸ್ಮಾರ್ಟ್​ಫೋನ್ ಪರಿಚಯಿಸಿದ ರಿಯಲ್ ಮಿ
Image
Poco F5 5G: ಭಾರತದಲ್ಲಿ ಸೇಲ್ ಕಾಣುತ್ತಿದೆ ಪೋಕೋ F5 5G ಸ್ಮಾರ್ಟ್​ಫೋನ್: ಆಫರ್ ಏನಿದೆ?

Google Pixel Fold: ಗ್ಯಾಜೆಟ್ ಲೋಕಕ್ಕೆ ಬಂತು ಗೂಗಲ್ ಫೋಲ್ಡಿಂಗ್ ಫೋನ್

ಯೂಟ್ಯೂಬ್ ಪರ್ಯಾಯ ಆ್ಯಪ್​ಗಳನ್ನು ಬಳಸಿ:

ಜಾಹೀರಾತು ಬೇಡ ಎಂದರೆ ಯೂಟ್ಯೂಬ್‌ನಂತೆಯೇ ಇರುವ ಪರ್ಯಾಯ ಆ್ಯಪ್‌ಗಳನ್ನು ಬಳಸಬಹುದು. OGYoutube, DNS66, NewPipe, YT Vanced, Ad Clearನಂತಹ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅವುಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಮೂಲಕ ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ವಿಡಿಯೋಗಳನ್ನು ನೋಡಬಹುದು. ಬೇಕಾದಲ್ಲಿ ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸಬಹುದು. ಸ್ವತಃ ಯೂಟ್ಯೂಬ್ ಡೌನ್ಲೋಡ್ ಆಯ್ಕೆ ನೀಡಿದ್ದು, ನಿಮ್ಮ ಬಳಿ ಇಂಟರ್ನೆಟ್ ಕನೆಕ್ಷನ್ ಇಲ್ಲ ಎಂದಾದರು ಡೌನ್ಲೋಡ್ ಮಾಡಿದ್ದರೆ ಆರಾಮವಾಗಿ ಯಾವುದೇ ಜಾಹೀರಾತು ಇಲ್ಲದೆ ವೀಕ್ಷಿಸಬಹುದು.

ಅಂತೆಯೆ ಕೇವಲ ಒಂದು ಡಾಕ್ ಹಾಕುವುದರಿಂದ ಯೂಟ್ಯೂಬ್​ನಲ್ಲಿ ಬರುವ ಜಾಹೀರಾತುಗಳನ್ನು ಬ್ಲಾಕ್ ಮಾಡಬಹುದು. ಯಾವುದೇ ಯೂಟ್ಯೂಬ್‌ ಲಿಂಕ್‌ನಲ್ಲಿ youtube.com ನಂತರದಲ್ಲಿ ಬರುವ ‘/’ ಚಿಹ್ನೆಗೂ ಮೊದಲು ಒಂದು ಚುಕ್ಕಿ (.) ಹಾಕಿ ಪ್ಲೇ ಮಾಡಿದರೆ, ಆ ವಿಡಿಯೋದಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಎಲ್ಲ ಜಾಹೀರಾತುಗಳನ್ನು ಬ್ಲಾಕ್‌ ಮಾಡುತ್ತದೆ. ಇದು ಕೇವಲ ಡೆಸ್ಕ್‌ಟಾಪ್‌ ಬ್ರೌಸರ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.

ಚಂದಾದಾರಿಕೆ ಪಡೆದುಕೊಳ್ಳಿ:

ಜಾಹೀರಾತುಗಳ ಕಿರಿಕಿರಿ ಬೇಡ ಎನ್ನುವವರು, ಹಣ ತೆತ್ತು ಯೂಟ್ಯೂಬ್‌ ಪ್ರೀಮಿಯಂ ಖಾತೆಯ ಚಂದಾದಾರಿಕೆ ಪಡೆದುಕೊಳ್ಳಬಹುದು. ಫ್ರೀ ಖಾತೆಯಲ್ಲಿ ಇಲ್ಲದ ಸವಲತ್ತುಗಳು, ಯೂಟ್ಯೂಬ್‌ ಪ್ರೀಮಿಯಂನಲ್ಲಿವೆ. ಇದುವರೆಗೂ ಅದಕ್ಕೆ ಹಣ ತೆರಲು ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ಆಯ್ಕೆಗಳು ಮಾತ್ರವೇ ಇದ್ದವು. ಆದರೆ ಈಗ ಯುಪಿಐ ಮೂಲಕವೂ ಶುಲ್ಕ ಸಂದಾಯ ಮಾಡಬಹುದಾಗಿದೆ. ಇದರಲ್ಲಿ ಯೂಟ್ಯೂಬ್‌ ಮ್ಯೂಸಿಕ್‌ನ ಭಂಡಾರದಲ್ಲಿರುವ ಹಾಡುಗಳನ್ನು ಕೇಳಬಹುದು. ಜೊತೆಗೆ ಯೂಟ್ಯೂಬ್‌ ಒರಿಜಿನಲ್ಸ್‌ ಸರಣಿಯಲ್ಲಿರುವ ಧಾರಾವಾಹಿಗಳನ್ನು ವೀಕ್ಷಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್