Realme Narzo N53: ಬಜೆಟ್ ಪ್ರಿಯರಿಗಾಗಿ ಕೇವಲ 8,999 ರೂ. ಗೆ ಆಕರ್ಷಕ ಸ್ಮಾರ್ಟ್​ಫೋನ್ ಪರಿಚಯಿಸಿದ ರಿಯಲ್ ಮಿ

ರಿಯಲ್‌ ಮಿ ಸಂಸ್ಥೆ ಭಾರತದಲ್ಲಿ ನೂತನ ರಿಯಲ್ ಮಿ ನಾರ್ಜೊ ಎನ್​53 (Realme Narzo N53) ಎಂಬ ಹೊಸ ಫೋನ್‌ ಬಿಡುಗಡೆ ಮಾಡಿದೆ. ಸಾಕಷ್ಟು ಸಂಚಲನ ಸೃಷ್ಟಿಸಿರುವ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ.

Realme Narzo N53: ಬಜೆಟ್ ಪ್ರಿಯರಿಗಾಗಿ ಕೇವಲ 8,999 ರೂ. ಗೆ ಆಕರ್ಷಕ ಸ್ಮಾರ್ಟ್​ಫೋನ್ ಪರಿಚಯಿಸಿದ ರಿಯಲ್ ಮಿ
Realme Narzo N53
Follow us
|

Updated on: May 18, 2023 | 3:26 PM

ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈರೇಂಜ್ ವರೆಗೆ ಫೋನ್​ಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಪ್ರಸಿದ್ಧ ರಿಯಲ್‌ ಮಿ (Realme) ಕಂಪನಿ ಈ ವರ್ಷ ಅತ್ಯುತ್ತಮ ಮೊಬೈಲ್​​ಗಳನ್ನು ಪರಿಚಯಿಸಿದೆ. ಈಗಾಗಲೇ ಸಾಲು ಸಾಲು ರಿಯಲ್ ಮಿ ಸ್ಮಾರ್ಟ್​ಫೋನ್​ಗಳು ಬಿಡುಗಡೆಗೆ ಸಜ್ಜಾಗಿವೆ ನಿಂತಿವೆ. ಇದರ ನಡುವೆ ಇದೀಗ ರಿಯಲ್‌ ಮಿ ಸಂಸ್ಥೆ ಭಾರತದಲ್ಲಿ ನೂತನ ರಿಯಲ್ ಮಿ ನಾರ್ಜೊ ಎನ್​53 (Realme Narzo N53) ಎಂಬ ಹೊಸ ಫೋನ್‌ ಬಿಡುಗಡೆ ಮಾಡಿದೆ. ಸಾಕಷ್ಟು ಸಂಚಲನ ಸೃಷ್ಟಿಸಿರುವ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ. ಹಾಗಾದರೆ ಈ ಫೋನಿನ ದರ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಭಾರತದಲ್ಲಿ ರಿಯಲ್‌ ಮಿ ನಾರ್ಜೋ N53 ಸ್ಮಾರ್ಟ್‌ಫೋನ್‌ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 4GB RAM + 64GB ಸ್ಟೋರೇಜ್‌ ಮಾದರಿಯ ಆಯ್ಕೆಗೆ 8,999 ರೂ. ಇದೆ. ಅಂತೆಯೆ 6GB RAM + 128GB ಸ್ಟೋರೇಜ್ ರೂಪಾಂತರದ ಆಯ್ಕೆಯು 10,999 ರೂ. ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಫೆದರ್ ಬ್ಲಾಕ್ ಮತ್ತು ಫೆದರ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಮೇ 22 ರಿಂದ ಖರೀದಿಗೆ ಸಿಗಲಿದೆ. ಮೊದಲ ಸೇಲ್ ದಿನ ವಿಶೇಷ ಆಫರ್‌ ಘೋಷಣೆ ಮಾಡಲಾಗಿದ್ದು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 1,000 ರೂ. ರಿಯಾಯಿತಿ ಸಿಗಲಿದೆ.

ಇದನ್ನೂ ಓದಿ
Image
Poco F5 5G: ಭಾರತದಲ್ಲಿ ಸೇಲ್ ಕಾಣುತ್ತಿದೆ ಪೋಕೋ F5 5G ಸ್ಮಾರ್ಟ್​ಫೋನ್: ಆಫರ್ ಏನಿದೆ?
Image
Google Pixel Fold: ಗ್ಯಾಜೆಟ್ ಲೋಕಕ್ಕೆ ಬಂತು ಗೂಗಲ್ ಫೋಲ್ಡಿಂಗ್ ಫೋನ್
Image
Motorola Edge 40: ಗ್ಯಾಜೆಟ್ ಮಾರುಕಟ್ಟೆಗೆ ಲೇಟೆಸ್ಟ್ ಎಂಟ್ರಿ ಕೊಟ್ಟಿದೆ ಮೋಟೊ ಫೋನ್
Image
Redmi Note 12S: ಶಓಮಿ ರೆಡ್ಮಿ ಆಕರ್ಷಕ ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಬಿಡುಗಡೆ

Sanchar Saathi Portal: ಕಳೆದುಹೋದ ಮೊಬೈಲ್ ಹುಡುಕುವುದು ಇನ್ಮುಂದೆ ಸುಲಭ, ವಿಧಾನ ಇಲ್ಲಿದೆ

ಫೀಚರ್ಸ್ ಏನಿದೆ?:

ರಿಯಲ್‌ ಮಿ ನಾರ್ಜೋ N53 ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.74 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದ್ದು, 180Hz ಟಚ್‌ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದೆ. ಬೆಲೆಗೆ ತಕ್ಕಂತೆ ಆಕ್ಟಾ-ಕೋರ್ ಯುನಿಸೊಕ್ T612 SoC ಪ್ರೊಸೆಸರ್ ವೇಗವನ್ನು ನೀಡಲಾಗಿದ್ದು, ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ವಿಶೇಷ ಎಂದರೆ ಈ ಫೋನ್​ನಲ್ಲಿ ಹೆಚ್ಚುವರಿ 6GB ವರ್ಚುವಲ್ RAM ಅನ್ನು ನೀಡಲಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ AI ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2MP ಸೆನ್ಸಾರ್‌ ಪಡೆದಿದೆ. ಇದಲ್ಲದೆ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ರಿಯಲ್‌ ಮಿ ನಾರ್ಜೋ N53 ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ವೈರ್ಡ್ ಸೂಪರ್‌ವೂಕ್‌ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕಂಪನಿ ಹೇಳಿರುವ ಪ್ರಕಾರ ಇದರಿಂದ 30 ನಿಮಿಷಗಳಲ್ಲಿ 0% ನಿಂದ 50% ವರೆಗೆ ಚಾರ್ಜ್‌ ಮಾಡಬಹುದು. ಉಳಿದಂತೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ