Poco F5 5G: ಭಾರತದಲ್ಲಿ ಸೇಲ್ ಕಾಣುತ್ತಿದೆ ಪೋಕೋ F5 5G ಸ್ಮಾರ್ಟ್​ಫೋನ್: ಆಫರ್ ಏನಿದೆ?

ಪೋಕೋ F5 5G ಫೋನ್ ಖರೀದಿಗೆ ಸಿಗುತ್ತಿದೆ. ಮಧ್ಯಮ ಬೆಲೆ ಹೊಂದಿರುವ ಈ ಸ್ಮಾರ್ಟ್​ಫೋನ್ ಸಾಕಷ್ಟು ಬಲಿಷ್ಠವಾಗಿದ್ದು, ಆರ್ಷಕ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ನೀಡಲಾಗಿದೆ.

Poco F5 5G: ಭಾರತದಲ್ಲಿ ಸೇಲ್ ಕಾಣುತ್ತಿದೆ ಪೋಕೋ F5 5G ಸ್ಮಾರ್ಟ್​ಫೋನ್: ಆಫರ್ ಏನಿದೆ?
Poco F5 Pro
Follow us
Vinay Bhat
|

Updated on: May 18, 2023 | 1:33 PM

ಭಾರತದಲ್ಲಿ ಪೋಕೋ (Poco) ಸಂಸ್ಥೆ ಕಳೆದ ವಾರ ಕೆಲ ತಿಂಗಳುಗಳ ಕಾಲ ಕಾದು ಆಕರ್ಷಕವಾದ ಹೊಸ ಸ್ಮಾರ್ಟ್​​ಫೋನೊಂದನ್ನು (Smartphone) ಅನಾವರಣ ಮಾಡಿತ್ತು. ತನ್ನ ಬಹುನಿರೀಕ್ಷಿತ ಪೋಕೋ ಎಫ್5 5ಜಿ (Poco F5 5G) ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಮಧ್ಯಮ ಬೆಲೆ ಹೊಂದಿರುವ ಈ ಸ್ಮಾರ್ಟ್​ಫೋನ್ ಸಾಕಷ್ಟು ಬಲಿಷ್ಠವಾಗಿದ್ದು, ಆರ್ಷಕ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ನೀಡಲಾಗಿದೆ. ಸದ್ಯ ಪೋಕೋ F5 5G ಫೋನ್ ಖರೀದಿಗೆ ಸಿಗುತ್ತಿದೆ.

ಬೆಲೆ ಎಷ್ಟು?:

ಪೋಕೋ F5 5G ಸ್ಮಾರ್ಟ್​ಫೋನ್ ಭಾರತದಲ್ಲಿ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ 8GB RAM + 256GB ಸ್ಟೋರೇಜ್ ರೂಪಾಂತರಕ್ಕೆ 28,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 12GB RAM + 256GB ಸ್ಟೋರೇಜ್ ಆಯ್ಕೆಗೆ 33,999 ರೂ. ಇದೆ. ಈ ಕಾರ್ಬಲ್ ಬ್ಲಾಕ್, ಸ್ನೋ ಸ್ಟಾರ್ಮ್ ವೈಟ್ ಮತ್ತು ಎಲೆಕ್ಟ್ರಿಕ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮೂಲಕ ಖರೀದಿಗೆ ಸಿಗುತ್ತಿದೆ. ಐಸಿಐಸಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಡೆದುಕೊಂಡರೆ 3,000 ರೂ. ಗಳ ರಿಯಾಯಿತಿ ನೀಡಲಾಗಿದೆ.

ಇದನ್ನೂ ಓದಿ
Image
Google Pixel Fold: ಗ್ಯಾಜೆಟ್ ಲೋಕಕ್ಕೆ ಬಂತು ಗೂಗಲ್ ಫೋಲ್ಡಿಂಗ್ ಫೋನ್
Image
Motorola Edge 40: ಗ್ಯಾಜೆಟ್ ಮಾರುಕಟ್ಟೆಗೆ ಲೇಟೆಸ್ಟ್ ಎಂಟ್ರಿ ಕೊಟ್ಟಿದೆ ಮೋಟೊ ಫೋನ್
Image
Redmi Note 12S: ಶಓಮಿ ರೆಡ್ಮಿ ಆಕರ್ಷಕ ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಬಿಡುಗಡೆ
Image
Sony Xperia 1 V: ಸ್ಮಾರ್ಟ್​ಫೋನ್ ಪ್ರಿಯರ ನೆಚ್ಚಿನ ಸೋನಿ ಎಕ್ಸ್​ಪೆರಿಯಾ ಬಿಡುಗಡೆ

Sanchar Saathi Portal: ಕಳೆದುಹೋದ ಮೊಬೈಲ್ ಹುಡುಕುವುದು ಇನ್ಮುಂದೆ ಸುಲಭ, ವಿಧಾನ ಇಲ್ಲಿದೆ

ಏನಿದೆ ಫೀಚರ್ಸ್?:

ಪೋಕೋ F5 5G ಸ್ಮಾರ್ಟ್‌ಫೋನ್‌ 2400*108 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಅಮುಲೋಡ್ ಡಿಸ್‌ಪ್ಲೇಯನ್ನು ಹೊಂದಿದೆ. 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌, ಡಾಲ್ಬಿ ವರ್ಷನ್, HDR10+ ಬೆಂಬಲ ಪಡೆದುಕೊಂಡಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಆಂಡ್ರಾಯ್ಡ್‌ 13ನಲ್ಲಿ ರನ್‌ ಆಗಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 64 ಮೆಗಾಫಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದು ಅತ್ಯುತ್ತಮ ಫೋಟೋವನ್ನು ಸೆರೆಹಿಡುತ್ತಿದೆ. ಫೋಟೋಗ್ರಫಿಗೆ ಹೇಳಿ ಮಾಡಿಸಿದ್ದಾಗಿದೆ. ಹಾಗೆಯೆ ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮುಂಭಾಗ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ 4K ಕ್ವಾಲಿಟಿಯ ವಿಡಿಯೋ ರೆಕಾರ್ಡ್ ಮಾಡಬಹುದು.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 67W ವೇಗದ ಚಾರ್ಜಿಂಗ್ ಬೆಂಬಲ ಕೂಡ ಪಡೆದುಕೊಂಡಿದೆ. ಕಂಪನಿ ಹೇಳಿರುವ ಪ್ರಕಾರ 0-100 % ಚಾರ್ಜ್ ಆಗಲು ಕೇವಲ 45 ನಿಮಿಷ ಸಾಕಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಹೆಡ್‌ಫೋನ್‌ ಜ್ಯಾಕ್‌ ಇರಲಿದೆ. ಅಂಡರ್ ಡಿಸ್ ಪ್ಲೇ ಫಿಂಗರ್​ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ