Sanchar Saathi Portal: ಕಳೆದುಹೋದ ಮೊಬೈಲ್ ಹುಡುಕುವುದು ಇನ್ಮುಂದೆ ಸುಲಭ, ವಿಧಾನ ಇಲ್ಲಿದೆ

ಇನ್ನುಮುಂದೆ ಕಳೆದುಹೋದ ಮೊಬೈಲ್​ ಫೋನ್ ಹುಡುಕುವುದು ಸುಲಭ, ಭಾರತದಲ್ಲಿ ಸಂಚಾರ ಸಾಥಿ ಪೋರ್ಟಲ್ (sancharsaathi.gov.in) ಪ್ರಾರಂಭಿಸಲಾಗಿದ್ದು, ಕಳೆದು ಹೋದ ಮೊಬೈಲ್​ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.

Sanchar Saathi Portal: ಕಳೆದುಹೋದ ಮೊಬೈಲ್ ಹುಡುಕುವುದು ಇನ್ಮುಂದೆ ಸುಲಭ, ವಿಧಾನ ಇಲ್ಲಿದೆ
ಮೊಬೈಲ್
Follow us
ನಯನಾ ರಾಜೀವ್
| Updated By: Digi Tech Desk

Updated on:May 17, 2023 | 11:27 AM

ಇನ್ನುಮುಂದೆ ಕಳೆದುಹೋದ ಮೊಬೈಲ್​ ಫೋನ್ ಹುಡುಕುವುದು ಸುಲಭ, ಭಾರತದಲ್ಲಿ ಸಂಚಾರ ಸಾಥಿ (Sanchar Saathi) ಪೋರ್ಟಲ್ ಪ್ರಾರಂಭಿಸಲಾಗಿದ್ದು, ಕಳೆದು ಹೋದ ಮೊಬೈಲ್​ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದೇಶದ ಯಾವುದೇ ಮೂಲೆಯಲ್ಲಿ ನಿಮ್ಮ ಮೊಬೈಲ್ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾಗಿದ್ದರೆ, ಅದನ್ನು ಕಂಡುಹಿಡಿಯಲು ಸರ್ಕಾರದ ಸಂಚಾರ ಸಾಥಿ ಪೋರ್ಟಲ್ ನಿಮಗೆ ಸಹಾಯ ಮಾಡುತ್ತದೆ. ಈ ಪೋರ್ಟಲ್​ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದ್ದಾರೆ. ಈ ಪೋರ್ಟಲ್‌ನ ವಿಶೇಷತೆಯೆಂದರೆ ಇದನ್ನು ಹಿಂದಿ, ಇಂಗ್ಲಿಷ್ ಮತ್ತು ದೇಶದ ಎಲ್ಲಾ ಭಾಷೆಗಳಲ್ಲಿ ಬಳಸಬಹುದು.

ಸಂಚಾರ ಸಾಥಿ ಪೋರ್ಟಲ್ ಸಿಇಐಆರ್​ ನೋ ಯುವರ್ ಮೊಬೈಲ್ ಮತ್ತು ಎಎಸ್​ಟಿಆರ್​ಗಳನ್ನು ಒಳಗೊಂಡಿದೆ. ಸಿಇಐಆರ್​ ಆರಂಭಿಕ ಪ್ರಾಜೆಕ್ಟ್​ ಆಗಿದ್ದು, ಟೆಲಿಕಾಂ ಸಚಿವಾಲಯವು ದೇಶದ ಕೆಲವು ಟೆಲಿಕಾಂ ಸರ್ಕಲ್​ಗಳಲ್ಲಿ ಆರಂಭಿಸಿದೆ. ಈ ಪೋರ್ಟಲ್ , ಟೆಲಿಕಾಂ ಅನಾಲಿಟಿಕ್ಸ್​ ಫಾರ್ ಫ್ರಾಡ್​ ಮ್ಯಾನೇಜ್​ಮೆಂಟ್ ಆ್ಯಂಡ್ ಕನ್ಸೂಮರ್ ಪ್ರೊಟೆಕ್ಷನ್ ಮತ್ತೊಂದು ಮಾದರಿಯನ್ನು ಒಳಗೊಂಡಿದೆ.

ಮತ್ತಷ್ಟು ಓದಿ: Tech Tips: ಇನ್ನುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ

ಕಳೆದು ಹೋದ ಅಥವಾ ಕಳ್ಳತನವಾದ ಮೊಬೈಲ್​ ಫೋನ್​ಗಳನ್ನು ಮರಳಿ ಪಡೆಯಲು ಸಿಇಐಆರ್ ನೆರವು ಒದಗಿಸಲಿದೆ. ಕಳೆದುಹೋದ ಅಥವಾ ಕಳ್ಳತನ ಮಾಡಲಾದ ಮೊಬೈಲ್ ಫೋನ್​ಗಳ ಬಳಕೆಯನ್ನು ಎಲ್ಲೆಡೆ ನಿರ್ಬಂಧಿಸಲು ಅವಕಾಶ ಕಲ್ಪಿಸಿಕೊಡುತ್ತದೆ.

ಕಳೆದುಹೋದ ಮೊಬೈಲ್​ಅನ್ನು ಪತ್ತೆಹಚ್ಚುವುದು ಹೇಗೆ?

  1. ಮೊದಲನೆಯದಾಗಿ, sancharsaathi.gov.in ಅನ್ನು ಕ್ಲಿಕ್ ಮಾಡಬೇಕು.
  2. ಇದಾದ ನಂತರ ಸಿಟಿಜನ್ ಸೆಂಟ್ರಿಕ್ ಸರ್ವಿಸಸ್ ಗೆ ಹೋಗಬೇಕು.
  3. ಇಲ್ಲಿ ನೀವು ಬ್ಲಾಕ್ ಯುವರ್ ಲಾಸ್ಟ್/ಸ್ಟೋಲನ್ ಮೊಬೈಲ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  4. ಇದಾದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ನೀವು ಮೊಬೈಲ್‌ಗೆ ಸಂಬಂಧಿಸಿದ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
  5. ನಿಮ್ಮ ಫೋನ್ ಡ್ಯುಯಲ್ ಸಿಮ್ ಆಗಿದ್ದರೆ, ಎರಡೂ ಮೊಬೈಲ್‌ ನಂಬರ್​ಗಳನ್ನು ನಮೂದಿಸಬೇಕು. ಇದರೊಂದಿಗೆ 15 ಅಂಕಿಗಳಿರುವ ಎರಡೂ IMEI ಸಂಖ್ಯೆಗಳನ್ನು ನಮೂದಿಸಬೇಕು.
  6. ಸಾಧನದ ಬ್ರಾಂಡ್ ಯಾವುದು ಮತ್ತು ಅದರ ಮಾದರಿ ಸಂಖ್ಯೆ ಏನು? ಅಲ್ಲದೆ, ಸಾಧನದ ಖರೀದಿಗೆ ಸರಕುಪಟ್ಟಿ ಅಪ್ಲೋಡ್ ಮಾಡಬೇಕು.
  7. ಇದರ ನಂತರ, ಫೋನ್ ಕರೆ ದಿನಾಂಕ, ಸಮಯ ಮತ್ತು ಸ್ಥಳ, ಜಿಲ್ಲೆ, ರಾಜ್ಯವನ್ನು ನೀಡಬೇಕಾಗುತ್ತದೆ.
  8. ಇದಲ್ಲದೇ ಪೊಲೀಸ್ ದೂರು ಸಂಖ್ಯೆ, ಠಾಣೆ ಇರುವ ಸ್ಥಳ ಹಾಗೂ ಅದರ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು.
  9. ಬಳಿಕ, ಮೊಬೈಲ್ ಮಾಲೀಕರ ಹೆಸರು, ವಿಳಾಸ, ಮಾಲೀಕರ ಗುರುತು ಮುಂತಾದ ವೈಯಕ್ತಿಕ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು.
  10. ಒಟಿಪಿಗಾಗಿ ಮೊಬೈಲ್ ಸಂಖ್ಯೆ, ಇಮೇಲ್ ನಮೂದಿಸಬೇಕು.
  11. ನಂತರ ಹಕ್ಕು ನಿರಾಕರಣೆ ಒಪ್ಪಿಕೊಳ್ಳಬೇಕು.
  12. ಇದರ ನಂತರ ನೀವು ಫಾರ್ಮ್ ಅನ್ನು ಸಲ್ಲಿಸಲು ಸಾಧ್ಯವಾಗುತ್ತದೆ

ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:59 am, Wed, 17 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ