ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೀತಾ ರಾಮನ ವಿಗ್ರಹ ಮಾರಾಟ
ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಒಳಭಾಗದ ಅಂಗಡಿಗಳಲ್ಲಿ ರಾಮನ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ.
ದೇವನಹಳ್ಳಿ, ಜನವರಿ 17: ಅಯೋದ್ಯೆಯಲ್ಲಿ (Ayodhya) ರಾಮಮಂದಿರದಲ್ಲಿ ಪ್ರಭು ಶ್ರೀರಾಮಚಂದ್ರನ (Sri Ram) ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಇಂದು ರಾಮಮಂದಿರ ದೇವಸ್ಥಾನದ ಆವರಣದೊಳಗೆ ಮೂರ್ತಿ ಪ್ರವೇಶಿಸುತ್ತದೆ. ನಾಳೆ (ಜ.18) ಗರ್ಭಗುಡಿಯಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲಿಂದ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತವೆ. ಇನ್ನು ದೇಶಾದ್ಯಂತ ಶ್ರೀರಾಮ ಜಪ ಆರಂಭವಾಗಿದೆ. ಮತ್ತೊಂದು ಕಡೆ ಶ್ರೀರಾಮನ ವಿಗ್ರಹಗಳ ಮಾರಾಟ ಜೋರಾಗಿ ನಡೆಯುತ್ತಿದೆ.
ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಒಳಭಾಗದ ಅಂಗಡಿಗಳಲ್ಲಿ ರಾಮನ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ವಿದೇಶ ಮತ್ತು ಅನ್ಯ ರಾಜ್ಯಗಳಿಂದ ಬಂದ ಜನರು ಇಲ್ಲಿ ರಾಮನ ವಿಗ್ರಹಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅಲ್ಲದೇ ಅನೇಕ ಪ್ರಯಾಣಿಕರು ಸೀತಾ, ರಾಮ ಹಾಗೂ ಹನುಮನ ಮೂರ್ತಿ ಖರೀದಿ ಮಾಡಿ ತಮ್ಮ ಊರುಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿ ರಾಮನ ವಿವಿಧ ಬಗೆಯ ಮೂರ್ತಿಗಳಿದ್ದು, ಪ್ರಯಾಣಿಕರ ಕಣ್ಮನ ಸೆಳೆಯುತ್ತಿವೆ.