ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಯತೀಂದ್ರರ ಜನಪ್ರಿಯತೆ ಹೆಚ್ಚಾಗಿದೆಯೇ?

ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಯತೀಂದ್ರರ ಜನಪ್ರಿಯತೆ ಹೆಚ್ಚಾಗಿದೆಯೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 17, 2024 | 10:46 AM

ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಯತೀಂದ್ರ ವೇದಿಕೆಯನ್ನು ತಮ್ಮ ತಂದೆಯ ಗುಣಗಾನ ಮಾಡಲು ಬಳಸಿಕೊಂಡರು. ಒಂದು ವರ್ಷದೊಳಗೆ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಜಾರಿಗೆ ತಂದಿದ್ದನ್ಮು ಶ್ಲಾಘಿಸಿದ ಯತೀಂದ್ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಿದರೆ ಅವರು ಅಡೆತಡೆಯಿಲ್ಲದೆ ಪೂರ್ಣಾವಧಿಗೆ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದರು.

ಹಾಸನ: ಇದು ಮೈಸೂರು ಜಿಲ್ಲೆಯ ದೃಶ್ಯವಲ್ಲ ಮತ್ತು ಕಾರಲ್ಲಿ ಆಗಮಿಸುತ್ತಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೂಡ ಅಲ್ಲ. ಆದರೂ ಯುವನಾಯಕನೊಬ್ಬನ ಸ್ವಾಗತಕ್ಕೆ ಸೇರಿರುವ ಜನಸಂದಣಿ ಬೆರಗು ಹುಟ್ಟಿಸುತ್ತದೆ. ಅಂದಹಾಗೆ, ಇದು ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮ ಮತ್ತು ಕಾರಲ್ಲಿರೋದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಗ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah). ನಿನ್ನೆ ಗ್ರಾಮದಲ್ಲಿ ಅವರು ಸಂಗೊಳ್ಳಿ ರಾಯಣ್ಣನ (Sangolli Rayanna) ಪ್ರತಿಮೆ ಅನಾವರಣಗೊಳಿಸಲು ಬಂದಾಗಿನ ದೃಶ್ಯಗಳಿವು. ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಮೇಲೆ ಶಾಸಕರಲ್ಲದಿದ್ದರೂ ಯತೀಂದ್ರ ಜನಪ್ರಿಯತೆ ಹೆಚ್ಚಾಗಿದೆ. ಅವರನ್ನು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಆಕಾಂಕ್ಷೆ ಸಿದ್ದರಾಮಯ್ಯನವರಿಗಿದೆ ಅಂತ ಹೇಳಲಾಗುತ್ತಿದೆಯಾದರೂ ಅವರಾಗಲೀ ಅಥವಾ ಯತೀಂದ್ರ ಆಗಲೀ ಅದನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಮುಖ್ಯಮಂತ್ರಿಯವರ ಮಗನೆಂಬ ಕಾರಣಕ್ಕೆ ಯತೀಂದ್ರ ಹೋದಲೆಲ್ಲೆಡೆ ಜನ ಸೇರುತ್ತಾರೋ ಅಥವಾ ಅವರ ಜನಪ್ರಿಯತೆಯೇ ಹಾಗಿದೆ ಅನ್ನೋದಿನ್ನೂ ಅರ್ಥವಾಗಿಲ್ಲ ಸ್ವಾಮಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ