ಜನವರಿ 23 ರಿಂದ ಭಕ್ತರಿಗೆ ರಾಮದರ್ಶನ ಮಾಡುವ ಅವಕಾಶ: ಗೋಪಾಲ್ ಜೀ, ರಾಮಮಂದಿರ ನಿರ್ಮಾಣ ಜವಾಬ್ದಾರಿ ಹೊತ್ತವರು
ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಹಲವಾರು ಕನ್ನಡಿಗರಿಗೆ ಸಿಕ್ಕಿರುವುದು ಭಾಗ್ಯವೆಂದು ಹೇಳುವ ಗೋಪಾಲ ಜೀ, ಗಣೇಶ ಹೆಗಡೆ ಹೆಸರಿನ ಮತ್ತೊಬ್ಬ ಕನ್ನಡಿಗ ಸಹ ಬಾಲರಾಮನ ವಿಗ್ರಹ ಕೆತ್ತಿದ್ದಾರೆ ಮತ್ತು ರಾಮಮಂದಿರ ವಿದ್ಯುದ್ದೀಕರಣ ಗುತ್ತಿಗೆ ಕರ್ನಾಟಕದ ಶಂಕರ್ ಎಲೆಕ್ಟ್ರಿಕಲ್ಸ್ ನವರಿಗೆ ಸಿಕ್ಕಿದೆ ಎಂದರು.
ಅಯೋಧ್ಯೆ: ರಾಮಮಂದಿರ ನಿರ್ಮಾಣದಲ್ಲಿ ಮತ್ತು ಬಾಲ ರಾಮನ ಪ್ರಾಣ ಪ್ರತಿಷ್ಠೆ ವಿಧಿವಿಧಾನಗಳಲ್ಲಿ ಕನ್ನಡಿಗರ ಕೊಡುಗೆ ಸಾಕಷ್ಟಿದೆ. ಐತಿಹಾಸಿಕ ಮಂದಿರ ನಿರ್ಮಾಣ ಜವಾಬ್ದಾರಿಯನ್ನು ಹೊತ್ತವರಲ್ಲಿ ಕರ್ನಾಟಕದ ಗೋಪಾಲ್ ಜೀ (Gopal Ji) ಪ್ರಮುಖರು. ಇವರೊಂದಿಗೆ ಟಿವಿ9 ಕನ್ನಡ ವಾಹಿನಿಯ ವರದಿಗಾರ ಬೆಳಗ್ಗೆ ಮಾತಾಡಿದ್ದು ಮತ್ತೊಬ್ಬ ಕನ್ನಡಿಗ ಅರುಣ್ ಯೋಗಿರಾಜ್ (Arun Yogiraj) ಕೆತ್ತಿರುವ ರಾಮಲಲ್ಲಾನ ವಿಗ್ರಹ (Ram Lalla idol) ರಾಮಮಂದಿರ ಪರಿಸರ ಇಂದು ಪ್ರವೇಶಿಸುವದನ್ನು ಮತ್ತು ಅದಕ್ಕೆ ಪೂರಕವಾಗಲಿರುವ ವಿಧಿವಿಧಾನಗಳ ಬಗ್ಗೆ ತಿಳಿಸಿದರು. ಅರ್ಚಕರಾದ ಡಾ ಅನಿಲ್ ಮಿಶ್ರಾ ಮತ್ತು ಅವರ ಧರ್ಮಪತ್ನಿ ಸರಯೂ ನದಿಯಲ್ಲಿ ಮಿಂದು ಬಾಲರಾಮನ ವಿಗ್ರಹಕ್ಕೆ ಗಂಧ, ತುಪ್ಪ ಮತ್ತು ಜೇನು ತುಪ್ಪದಿಂದ ಅಭಿಷೇಕ ಮಾಡಿದ ಬಳಿಕ ವಿಗ್ರಹವನ್ನು ಇಂದು ಮಧ್ಯಾಹ್ನ ಅಭಿಜಿತ್ ಮುಹೂರ್ತದಲ್ಲಿ ರಾಮಮಂದಿರದ ಪ್ರಾಂಗಣದಲ್ಲಿ ತರಲಾಗುವುದು ಮತ್ತು ಇಂದಿನಿಂದ ಜನವರಿ 21 ರವರೆಗೆ 4 ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಗೋಪಾಲ್ ಜೀ ಹೇಳಿದರು. ಜನವರಿ 22 ರಂದು ಮಧ್ಯಾಹ್ನ 12.20 ಕ್ಕೆ ಮಂದಿರದ ಗರ್ಭಗುಡಿಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ