ಅಯೋಧ್ಯೆಯ ಹನುಮಾನ್ ಗಡಿಗೆ ಆ ಹೆಸರು ಯಾಕೆ ಬಂತು ಗೊತ್ತಾ? ಮಾಹಿತಿ ಇಲ್ಲಿದೆ

ಅಯೋಧ್ಯೆಯ ಹನುಮಾನ್ ಗಡಿಗೆ ಆ ಹೆಸರು ಯಾಕೆ ಬಂತು ಗೊತ್ತಾ? ಮಾಹಿತಿ ಇಲ್ಲಿದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 17, 2024 | 12:49 PM

ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ಜನವರಿ 21 ಮತ್ತು 22 ರಂದು ಭದ್ರತೆಯ ದೃಷ್ಟಿಯಿಂದ ಅಯೋಧ್ಯೆಯ ಎಲ್ಲ ರಸ್ತೆಗಳನ್ನು ಬ್ಯಾರಿಕೇಡಿಂಗ್ ಮಾಡಲಾಗುವುದು ಮತ್ತು ಸ್ಥಳೀಯರು ಓಡಾಡಬೇಕಾದರೂ ಸ್ಥಾನಿಕ ಪಾಸನ್ನು ಹೊಂದಿರಬೇಕಾಗುತ್ತದೆ. ಸಾರ್ವಜನಿಕರಿಗೆ ಜನವರಿ 23 ರಿಂದ ರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಲಿರುವುದರಿಂದ ಭಕ್ತಸಾಗರ ನಗರದೊಳಗೆ ಪ್ರವಾಹೋಪಾದಿಯಲ್ಲಿ ಹರಿದುಬರಲಿದೆ.

ಅಯೋಧ್ಯೆ: ರಾಮಮಂದಿರದ ಪ್ರಾಣ ಪ್ರತಿಷ್ಠೆ (Ram Temple Consecration Ceremony) ಸಮಯ ಹತ್ತಿರವಾಗುತ್ತಿದೆ ಮತ್ತು ಆ ಐತಿಹಾಸಿಕ ಕ್ಷಣಕ್ಕಾಗಿ ರಾಮನ ಜನ್ಮಭೂಮಿ ಅಯೋಧ್ಯೆ ನಗರಿ ಸಂಪೂರ್ಣವಾಗಿ ಸಜ್ಜಾಗಿ ಅಪ್ಪಟ ಧಾರ್ಮಿಕ ನಗರಿಯಂತೆ (religious town) ಕಂಗೊಳಿಸುತ್ತಿದೆ ಎಂದು ಟಿವಿ9 ಕನ್ನಡ ವಾಹಿನಿ ವರದಿಗಾರ ಹೇಳುತ್ತಾರೆ. ಬೆಳಗ್ಗೆ ಸುಮಾರು 6.30 ಕ್ಕೆ ಅಲ್ಲಿನ ಕೊರೆಯುವ ಚಳಿಯಲ್ಲಿ ಈ ವಾಕ್ ಥ್ರೂ ಅವರು ಮಾಡಿ ಕಳಿಸಿದ್ದಾರೆ. ದೃಶ್ಯಗಳಲ್ಲಿ ನಿಮಗೆ ಕಾಣಿತ್ತಿರೋದು ರಾಮಪಥ್ ಗುಂಟ ಇರುವ ಹನುಮಾನ್ ಗಡಿ (Hanuman Garhi). ಅಯೋಧ್ಯೆಯಲ್ಲಿ ಧರ್ಮಪಥ್ ಮತ್ತು ಭಕ್ತಿಪಥ್ ಕೂಡ ಇವೆ. ಪ್ರಭು ಶ್ರೀರಾಮ ತನ್ನ ಅವತಾರವನ್ನು ತ್ಯಜಿಸುವಾಗ ಪರಮ ಭಕ್ತ ಮತ್ತು ಭಗವಾನ್ ಆಂಜನೇಯನಿಗೆ ಈ ಭಾಗವನ್ನು ನೋಡಿಕೊಳ್ಳುವಂತೆ ಹೇಳಿದ ಕಾರಣ ಈ ಸ್ಥಳಕ್ಕೆ ಹನುಮಾನ್ ಗಡಿ ಅಂತ ಹೆಸರು ಬಂದಿದೆಯೆಂಬ ಪ್ರತೀತಿ ಇದೆ. ಅದಕ್ಕೆ ಪೂರಕವಾಗಿ ಈ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಂಗಗಳಿವೆ. ರಾಮಪಥ್ ನಲ್ಲಿರುವ ಬೀದಿ, ಮನೆ ಮತ್ತು ಅಂಗಡಿಗಳು ಒಂದೇ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ ಮತ್ತು ಎಲ್ಲ ಕಟ್ಟಡಗಳಿಗೆ ಒಂದೇ ಬಗೆಯ ಪೇಂಟ್ ಬಳಸಲಾಗಿದೆ; ಹಾಗಾಗೇ ಅಯೋಧ್ಯೆಯ ಈ ಭಾಗ ಒಂದು ದೇವನಗರಿಯಂತೆ ಗೋಚರಿಸುತ್ತದೆ ಎಂದು ವರದಿಗಾರ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ