Ayodhya Ram Mandir: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ದಿನಾಂಕವನ್ನು ಅಮಿತ್ ಶಾ ನಿರ್ಧರಿಸಿಲ್ಲ: ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ
ಮಕರ ಸಂಕ್ರಾಂತಿ ಮುಗಿದ ಬಳಿಕ ಉತ್ತರಾಯಣ ಕಾಲದಲ್ಲಿ ಪ್ರಾಣ ಪ್ರತಿಷ್ಠೆ ಮಾಡಲು ವಿಶ್ವಸ್ಥರು ನಿರ್ಧರಿಸಿದ್ದೇವೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ದಿನಾಂಕವನ್ನು ಅಮಿತ್ ಶಾ (Amit shah) ಹೇಳಿಲ್ಲ. ಮಕರ ಸಂಕ್ರಾಂತಿ ಮುಗಿದ ಬಳಿಕ ಉತ್ತರಾಯಣ ಕಾಲದಲ್ಲಿ ಪ್ರಾಣ ಪ್ರತಿಷ್ಠೆ ಮಾಡಲು ವಿಶ್ವಸ್ಥರು ನಿರ್ಧರಿಸಿದ್ದೇವೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Vishwa Prasanna Theertha Swamiji) ಹೇಳಿದರು. ಅಯೋಧ್ಯ ರಾಮಮಂದಿರ ನಿರ್ಮಾಣ ವಿಚಾರವಾಗಿ ನಗರದಲ್ಲಿ ಮಧ್ಯಮದವರೊಂದಿಗೆ ಮಾತನಾಡಿ, ಜನವರಿ 2024, ಮಧ್ಯಭಾಗದಲ್ಲಿ ರಾಮದೇವರ ಪ್ರಾಣ ಪ್ರತಿಷ್ಠೆ ಆಗಲಿದೆ. ಮುಂದಿನ ವರ್ಷ ಜನವರಿ 15ರೊಳಗೆ ಮಂದಿರ ಸಂಪೂರ್ಣ ಸಿದ್ಧವಾಗಲಿದೆ. ಮಂದಿರದ ಮೊದಲನೇ ಹಂತ ನಿರ್ಮಾಣವಾಗಿರುತ್ತೆ. ದೇವರನ್ನು ಪ್ರತಿಷ್ಠೆ ಮಾಡುವ ಮಹಡಿಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತೆ. ಗೋಡೆಯ ಕೆಲಸಗಳೆಲ್ಲ ಈಗಾಗಲೇ ಪೂರ್ಣಗೊಂಡಿವೆ. ಆರೆಳು ಫೀಟ್ ವರೆಗಿನ ಗೋಡೆ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಜನವರಿ 29 ನೇ ತಾರೀಕಿಗೆ ಪ್ರತಿಮೆಯ ಸ್ವರೂಪ ತೀರ್ಮಾನ ಆಗುತ್ತೆ
ಮುಂದಿನ ವರ್ಷದ ವೇಳೆಗೆ ಬಹುತೇಕ ನಿರ್ಮಾಣ ಕಾರ್ಯ ಪೂರ್ಣಗೊಂಡಿರುತ್ತೆ. ಪ್ರತಿಮೆ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಈಗಾಗಲೇ ಶಿಲಾ ಸಂಗ್ರಹ ಮಾಡಿ ಆಗಿದೆ. ಪ್ರತಿಮೆ ಸ್ವರೂಪ ಹೇಗಿರಬೇಕೆಂದು ಮತ್ತೊಂದು ಸುತ್ತಿನ ಚರ್ಚೆ ನಡೆಯುತ್ತೆ. ಜನವರಿ 29 ನೇ ತಾರೀಕಿಗೆ ಪ್ರತಿಮೆಯ ಸ್ವರೂಪ ತೀರ್ಮಾನ ಆಗುತ್ತೆ. ಅನೇಕ ಭಾವಚಿತ್ರಗಳನ್ನು ಸಂಗ್ರಹಿಸಿ ದಾಖಲಿಸಿದ್ದೇವೆ. ಪ್ರತ್ಯೇಕ ಪ್ರತಿಮೆಗಳ ಬೇರೆ ಬೇರೆ ರಚನೆಗಳ ಅಧ್ಯಯನ ನಡೆಯುತ್ತಿದೆ ಎಂದರು.
ಇದನ್ನೂ ಓದಿ: Ayodhya Ram Mandir: 2024ರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಐದೂವರೆ ಅಡಿ ಎತ್ತರದ ಬಾಲರಾಮನ ಪ್ರತಿಮೆ ನಿರ್ಮಾಣ
ಯಾವ ಪ್ರತಿಮೆಯ ಯಾವ ಭಾಗ ಸುಂದರವಾಗಿದೆ ಎಂದು ನಿರ್ಣಯಿಸಲಾಗುತ್ತದೆ. ನಿಲುವು ಮುಖ ಭಂಗಿ ನೋಡಿ ನಿರ್ಧರಿಸಲಾಗುವುದು. ಈ ಹಿಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಅಂತಿಮ ಸ್ವರೂಪ ಮುಂದಿನ ಸಭೆಯಲ್ಲಿ ತೀರ್ಮಾನವಾಗಲಿದೆ. ಜನವರಿ 29ನೇ ರಂದು ಸಂಪೂರ್ಣ ನಿರ್ಧಾರವಾಗಲಿದೆ. ನಿಂತ ಭಂಗಿಯ ಬಾಲರಾಮನ ಪ್ರತಿಮೆ ನಿರ್ಮಿಸಲಾಗುವುದು. ಸುಮಾರು ಐದೂವರೆ ಅಡಿ ಎತ್ತರದ ಬಾಲರಾಮನ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: Ayodhya Ram Mandir: 2024ರ ಜನವರಿ 1ರಂದು ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ: ಅಮಿತ್ ಶಾ ಮಹತ್ವದ ಘೋಷಣೆ
ಆರ್ಥಿಕವಾದ ಯಾವುದೇ ಸಮಸ್ಯೆ ಇಲ್ಲ
ಎರಡುವರೆ ಅಡಿ ಎತ್ತರದ ಪೀಠದಲ್ಲಿ ಈ ಪ್ರತಿಮೆ ಇರಿಸಲಾಗುವುದು. ಮುಖದಲ್ಲಿ ಬಾಲ ಭಾವ ಕಾಣುವಂತೆ ಪ್ರತಿಮೆ ರಚಿಸಲಾಗುವುದು. ಬಾಲರಾಮನ ದರ್ಶನಕ್ಕೆ 20 ಅಡಿ ದೂರದಿಂದ ವ್ಯವಸ್ಥೆ ಮಾಡಲಾಗುವುದು. ದೂರದಿಂದ ದೇವರ ದರ್ಶನ ಆಗುವ ಕಾರಣ ಎತ್ತರದ ಪ್ರತಿಮೆ ನಿರ್ಮಾಣ ಅನಿವಾರ್ಯ. ರಾಮನ ನೀಲ ಮೈಬಣ್ಣದ ರೂಪದಲ್ಲೇ ಪ್ರತಿಮೆ ಇರಲಿದೆ. ಹನುಮಂತ ಸುಗ್ರೀವ ವಷಿಷ್ಠಾಧಿಗಳ ಪ್ರತಿಮೆ ಕೂಡ ಮಂದಿರದಲ್ಲಿ ನಿರ್ಮಾಣವಾಗಲಿದೆ. ರಾಮ ಮಂದಿರಕ್ಕೆ ಬೇಕಾಗಿರುವ ಆರ್ಥಿಕ ಕ್ರೂಡೀಕರಣ ಈಗಾಗಲೇ ಮುಗಿದಿದೆ. ಆರ್ಥಿಕವಾದ ಯಾವುದೇ ಸಮಸ್ಯೆ ಇಲ್ಲ ಎಂದು ಪೇಜಾವರ ಶ್ರೀ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.