ಮಂಜುಳಾ ಮದುವೆ ಹಿಂದಿದೆ ದುರಂತ​ ಕಥೆ; ಸಾವಿನ ಕಾರಣ ವಿವರಿಸಿದ ಹಿರಿಯ ನಟ ರಾಜೇಶ್​

| Updated By: ಮದನ್​ ಕುಮಾರ್​

Updated on: Jan 01, 2022 | 7:32 PM

ಖ್ಯಾತ ನಟಿ ಮಂಜುಳಾ ಅವರದ್ದು ದುರಂತ ಸಾವು. ಅದಕ್ಕೆ ಕಾರಣ ಆಗಿದ್ದೇನು ಎಂಬುದನ್ನು ಹಿರಿಯ ನಟ ರಾಜೇಶ್​ ವಿವರಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸ್ಟಾರ್​ ನಟಿಯಾಗಿ ಮೆರೆದವರು ಮಂಜುಳಾ (Actress Manjula). ಆದರೆ ಅವರು ಖಾಸಗಿ ಜೀವನದಲ್ಲಿ ಅಷ್ಟೇನೂ ನೆಮ್ಮದಿ ಕಾಣಲಿಲ್ಲ. ಹಲವರನ್ನು ನಂಬಿ ಅವರು ಮೋಸ ಹೋಗಿದ್ದರು. ಆ ಘಟನೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಂದಿನ ಘಟನೆಗಳ ಬಗ್ಗೆ ಹಿರಿಯ ನಟ ರಾಜೇಶ್​ (Senior Actor Rajesh) ಅವರು ವಿವರಿಸಿದ್ದಾರೆ. ‘ಟಿವಿ9 ಕನ್ನಡ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಂಜುಳಾ ಬದುಕಿನ ಬಗ್ಗೆ ರಾಜೇಶ್​ ಮಾತನಾಡಿದ್ದಾರೆ. ಮದುವೆ ಮತ್ತು ಪ್ರೀತಿಯ ವಿಚಾರದಲ್ಲಿ ಅವರು ಮಾಡಿಕೊಂಡ ಆಯ್ಕೆಗಳು ಸರಿ ಇರಲಿಲ್ಲ. ಹಲವಾರು ಸಿನಿಮಾಗಳಲ್ಲಿ ನಟಿಸಿದ ಮಂಜುಳ ಬದುಕು 31ನೇ ವಯಸ್ಸಿನಲ್ಲೇ ಅಂತ್ಯವಾಯ್ತು. ಅವರ ಸಾವು ಹೇಗೆ ಸಂಭವಿಸಿತು? ಅವರಿಗೆ ಮೋಸ ಮಾಡಿದವರು ಯಾರು? ಈ ಎಲ್ಲ ವಿಚಾರಗಳನ್ನು ರಾಜೇಶ್​ ಅವರು ವಿವರಿಸಿದ್ದಾರೆ.

ಇದನ್ನೂ ಓದಿ:

‘ಶಾಂತಿ ಕ್ರಾಂತಿ’ ಶೂಟಿಂಗ್​ನಲ್ಲಿ ಮಕ್ಕಳಿಗಾಗಿ ಹಾಲಿನ ಟ್ಯಾಂಕರ್​ ತರಿಸಿದ್ದರು ರವಿಚಂದ್ರನ್​: ದೊಡ್ಡಣ್ಣ

‘ಆ ಕಾಲದಲ್ಲೇ ಶಂಕರ್​ ನಾಗ್​ ಲ್ಯಾಪ್​ಟಾಪ್​ ಬಳಸುತ್ತಿದ್ರು’; ಅಚ್ಚರಿ ವಿಚಾರ ಹಂಚಿಕೊಂಡ ಬಿರಾದಾರ್​